ಅಂತೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮುಹೂರ್ತ ಫಿಕ್ಸ್

 


ವಿಜಯ ಸಂಘರ್ಷ


ಬೆಂಗಳೂರು: ಹಲವಾರು ದಿನಗಳಿಂದ ಇನ್ನೇನು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತ್ತು,  ಎನ್ನುವುದರಲ್ಲಿ ಕೊರೊನಾ ಎರಡನೇ ಅಲೆಯ ಆವರಿಸಿದ ಹಿನ್ನಲೆಯಲ್ಲಿ ಮುಂದೂಡಿ ಆದೇಶ ಹೊರಬಿತ್ತು. ಆದರೆ ಭಯದ ನಡುವೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ.

ಕಳೆದ ವರ್ಷ ಆರು ದಿನವೂ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಎರಡು ದಿನ ಮಾತ್ರ ಪರೀಕ್ಷೆ ನಡೆಯಲಿದೆ.

ಜುಲೈ 19 ಹಾಗೂ 22 ರಂದು ಪರೀಕ್ಷೆ ನಡೆಯಲಿದೆ. ಮೊದಲ ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ, ಎರಡನೇ ದಿನ ಭಾಷಾ ಪತ್ರಿಕೆ ಕನ್ನಡ, ಹಿಂದಿ, ಇಂಗ್ಲೀಷ್ ಇರಲಿದೆ.

ಈ ಬಾರಿ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 73,066 ಪರೀಕ್ಷಾ ಕೊಠಡಿಗಳು, ಒಂದು ಕೊಠಡಿಯಲ್ಲಿ 12 ಮಕ್ಕಳು, ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ. ಎಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆ, ಪ್ಯಾರಾ ಮೆಡಿಕಲ್ ಸ್ಟಾಫ್ ಅವರನ್ನು ನೇಮಕ ಮಾಡಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪೂರ್ವ ಸಿದ್ಧತೆಯನ್ನು ಅವಲೋಕಿಸಿದ ಸಚಿವ  ಸುರೇಶ್‌ಕುಮಾರ್, ಎಲ್ಲ‌ ಜಿಲ್ಲಾ‌ಧಿಕಾರಿಗಳು, ಮುಖ್ಯ‌ಕಾರ್ಯ‌ ನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೊ ಸಂವಾದದ ಮೂಲಕ ನಿರ್ದೇಶನಗಳನ್ನು ನೀಡಿದರು.

ವಿಜಯ ಸಂಘರ್ಷ ಕ್ಕೆ ಸುದ್ದಿ 
ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು