ವಿಜಯ ಸಂಘರ್ಷ
ಹೈದರಾಬಾದ್: ತೆಲುಗು ಸಿನಿಮಾ ರಂಗದ ಹಿರಿಯ ನಾಯಕ ನಟ, ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ನರೇಶ್ ವ್ಯಾಪಾರಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾವು, ನೇರಳೆ ಹಣ್ಣಿನ ವ್ಯಾಪಾರ ಮಾಡಿ 3,000 ರೂ ಸಂಪಾದಿಸಿದ್ದಾರೆ. ಸರಣಿ ಸಿನಿಮಾಗಳ ಮೂಲಕ ಸದಾ ಬಿಡುವಿಲ್ಲದ ನಟರಾಗಿದ್ದ ನರೇಶ್, ಲಾಕ್‌ಡೌನ್ ಅವಧಿಯಲ್ಲಿ ಕಳೆದೊಂದು ವರ್ಷದಲ್ಲಿ ರೈತನಾಗಿ ತಮ್ಮ ತೋಟ ನೋಡಿಕೊಂಡಿದ್ದರು. ತೋಟದಲ್ಲಿ ಸಮೃದ್ದವಾಗಿ ಬೆಳೆದಿದ್ದ ಮಾವು ಹಾಗೂ ನೇರಳೆ ಹಣ್ಣನ್ನು ತಮ್ಮ ಸ್ಟುಡಿಯೋದಲ್ಲಿ ಕೆಲಸ ಮಾಡುವವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಹಣ ಸಂಪಾದಿಸಿದ್ದಾರೆ. ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ನೇರಳೆ ಹಾಗೂ ಮಾವಿನಹಣ್ಣನ್ನು ಕಿಲೋಗೆ 50 ರೂ.ಗೆ ಮಾರಾಟದ ಮೂಲಕ 3,600 ರೂ ಸಂಪಾದಿಸಿದ್ದೇನೆ. ಸಿನಿಮಾ ನಟನಾಗಿ ದೊಡ್ಡ ಮೊತ್ತವನ್ನು ಸಂಭಾವನೆ ಪಡೆದುಕೊಳ್ಳುವೆ, ಆದರೆ ಈ ಸಣ್ಣ ಮೊತ್ತ ತನಗೆ ಹೆಚ್ಚು ತೃಪ್ತಿ, ಸಂತೋಷ ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
‘ಪಂಡಂಟಿ ಕಾಪುರಂ’ ಮತ್ತು ‘ರೆಂಡು ಕುಟುಂಬಾಲ ಕಥ’ ದಂತಹ ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ ನರೇಶ್ ಅವರನ್ನು ‘ಪ್ರೇಮಾ ಸಂಕೇಳ್ಳು ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗಿದ್ದರು. ‘ಪ್ರೇಮಾ ಎಂತ ಮಧುರಂ’, ‘ಮೊಗುಡು ಪೆಳ್ಳಾಲು ‘, ‘ಶ್ರೀವಾರಿಕಿ ಪ್ರೇಮಲೇಖಾ’, ‘ಚೂಪುಲು ಕಲಿಸಿನಾ ಶುಭವೇಳ’, ‘ಹೈ ಹೈ ನಾಯಕಾ’ ಚಿತ್ರಗಳ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795