ವಿಜಯ ಸಂಘರ್ಷ
ನಾಗಮಂಗಲ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರ ಜೀವನಾಡಿಯಂತಿರುವ ಹಾಲು ಒಕ್ಕೂಟವನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಡಲು ಬದ್ಧವೆಂದು ಹಾಲು ಒಕ್ಕೂಟ ಮಾಜಿ ಅಧ್ಯಕ್ಷ ಜವರೇಗೌಡ ತಿಳಿಸಿದರು .
ಅವರಿಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಎರಡು ಮೂರು ದಿನದಿಂದ ಹಾಲು ನೀರು ಪ್ರಕರಣದ ಆಡಿಯೋ ವೈರಲ್ ಆಗಿದ್ದು, ಮಾಜಿ ಶಾಸಕ ಚೆಲುವರಾಯಸ್ವಾಮಿ ಹಾಗೂ ಜವರೇಗೌಡರು ಮಾತನಾಡಿರುವ ವಿಚಾರದ ಬಗ್ಗೆ ವಿವರಿಸಿ ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲದಿದ್ದರೆ ಬಹಿರಂಗವಾಗಿ ಕ್ಷಮೆಕೋರುತ್ತ ಪ್ರಸ್ತುತ ಒಕ್ಕೂಟದಲ್ಲಿ ನಡೆಯುತ್ತಿರುವ ಪ್ರಕರಣ ಈಗಾಗಲೇ ಬೆಳಕಿಗೆ ಬಂದಿದ್ದು ಇದರ ಸತ್ಯಾಸತ್ಯತೆಯನ್ನು ಜಿಲ್ಲೆಯ ರೈತರಿಗೆ ಮನವರಿಕೆ ಮಾಡಲು ಹಾಲು ಒಕ್ಕೂಟದ ಪ್ರಕರಣದ ಬಗ್ಗೆ ಜಿಲ್ಲೆಯ ಒಕ್ಕೂಟದ ಮಾಜಿ ಅಧ್ಯಕ್ಷರುಗಳು ಹಾಗೂ ಹಾಲು ಒಕ್ಕೂಟ ಉಳಿಸುವ ಸಂಬಂಧ ಅನೇಕರು ನಮ್ಮ ಅಭಿಪ್ರಾಯವನ್ನು ಪಡೆದಿದ್ದು ಇದರ ಬಗ್ಗೆ ಯಾವ ರಾಜಕಾರಣವು ಇಲ್ಲದೇ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದು ತಿಳಿಸಿದರು .
ಈ ಪ್ರಕರಣದಿಂದ ಮತ್ತೊಮ್ಮೆ ಜವರೇಗೌಡರಿಗೆ ಅಧಿಕಾರದ ಆಸೆ ಇದೆ ಎಂಬುದು ಸುಳ್ಳು ಮತ್ತೊಮ್ಮೆ ನಮಗೆ ಯಾವುದೇ ಅಧಿಕಾರ ಬೇಡವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಹಾಲು ನೀರು ಪ್ರಕರಣವನ್ನು ದಾರಿತಪ್ಪಿಸುವ ಯೋಜನೆಗೆ ಮುಂಚಿತವಾಗಿ ಹೋರಾಟದ ಅನಿವಾರ್ಯತೆ ಯಾಗಿರುವುದರಿಂದ ಜಿಲ್ಲೆ ರೈತರ ಪರವಾಗಿ ಹೋರಾಟದ ಅನಿವಾರ್ಯತೆ ಇದೆ ಎಂದರು .
ದೇವಲಾಪುರ ಜಗದೀಶ್ ನಾಗಮಂಗಲ
ವಿಜಯ ಸಂಘರ್ಷ ಕ್ಕೆ ಸುದ್ದಿ
ನೀಡಲು ಕರೆ ಮಾಡಿ
+91 9743225795