ವಿಜಯ ಸಂಘರ್ಷ
ತೀರ್ಥಹಳ್ಳಿ: ಕೆಲವರು ಕೊರೊನ ಲಕ್ಷಣಗಳು ಕಂಡು ಬಂದರು ಆತಂಕ ಪಟ್ಟು ಮುಜುಗರಕ್ಕೊಳಗಾಗಿ ಕೊರೊನ ತಪಾಸಣೆ ಮಾಡಿಸದೆ ನಿರ್ಲಕ್ಷ್ಯಿಸುತ್ತಿರುವುದು ಆತಂಕಕಾರಿ, ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಅವರು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರ ದಲ್ಲಿಂದು ಕಾರ್ಮಿಕರಿಗೆ ವ್ಯಾಕ್ಸಿನ್ ನೀಡುವ ಸಂದರ್ಭದಲ್ಲಿ ಮಾತನಾಡಿದ
ಉದಾಸೀನ ಮಾಡದೆ ಕೊರೊನ ತಪಾಸಣೆ ಮಾಡಿಸಿ, ರೋಗ ಲಕ್ಷಣ ಕಂಡುಬಂದರೆ ಆತಂಕ ಬೇಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿ ಎಂದರು.
ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆ ಕೊರೊನ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿದ್ದು ಸಾಕಷ್ಟು ಮಂದಿ ರೋಗದಿಂದ ಗುಣಮುಖರಾಗಿ ಹೊರ ಹೋಗಿದ್ದಾರೆ.ಅನುಭವಿ ವೈದ್ಯರ ತಂಡವಿದ್ದು ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ.ಕೆಲವು ವ್ಯಕ್ತಿಗಳು ತಪಾಸಣೆ ಮಾಡಿಸದೆ ಕೊನೆಯಗಳಿಗೆ ಯಲ್ಲಿ ಸಾವನ್ನು ತಂದುಕೊಂಡಿದ್ದಾರೆ,
ಯಾರು ನಿರ್ಲಕ್ಷ್ಯದೆ ಬೇಡ ಎಂಬುದಾಗಿ
ನಿಮ್ಮ ಆರೋಗ್ಯ, ನಿಮ್ಮ ಕೈಯಲ್ಲಿ, ಅದನ್ನು ಕಾಪಾಡಿಕೊಳ್ಳಿ ಎಂದು ಆತ್ಮಸ್ಥೈರ್ಯ ತುಂಬಿದರು.
ಕಾರ್ಮಿಕರು ಹೆಚ್ಚಾಗಿ ಆರೋಗ್ಯ ತಪಾಸಣೆ ಮಾಡಿಸಿ ಎಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದುಕೊಳ್ಳಿ
ನೀವು ಶ್ರಮಿಕರು ನಿಮ್ಮ ಜೊತೆ ಸದಾ ಕಾಲ ಸರ್ಕಾರವಿದೆ ಆತಂಕಪಡುವ ಅಗತ್ಯವಿಲ್ಲ ಎಂದರು.
ಈಗಾಗಲೇ ಕೊರೊನ ಮೂರನೇ ಬರಲಿದೆ ಎಂಬ ತಜ್ಞರ ಮಾಹಿತಿಗೆ ತಾಲ್ಲೂಕು ಆಡಳಿತ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದೆ,
ಇನ್ನೂ ಇದೀಗ ಹೊಸದಾಗಿ ಡೆಲ್ಟಾ ಎಂಬ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈಗಾಗಲೇ ಕೆಲವು ಕಡೆ ಕಂಡುಬರುತ್ತಿದೆ ಎಲ್ಲರೂ ಎಚ್ಚರಿಕೆ ಯಿಂದಿರೋಣ ಮೈಮರೆತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ,
ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುತ್ತಮುತ್ತಲಿನ ಪರಿಸರ ಸ್ವಚ್ಚತೆಯಿಂದ ಇರಿಸಿಕೊಂಡು
ರೋಗ ತಡೆಯುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಸಭೆಗೆ ತಿಳಿಸಿದರು.
ವಿಜಯ ಸಂಘರ್ಷ ಗೆ ಸುದ್ದಿ
ನೀಡಲು ಕರೆ ಮಾಡಿ
+91 9743225795