ವಿಜಯ ಸಂಘರ್ಷ
ಶಿವಮೊಗ್ಗ : ಚುನಾವಣೆ ಆಯೋಗ ಜಿ.ಪಂ ಮೀಸಲಾತಿ ಘೋಷಣೆಯಲ್ಲಿ ಸರ್ಕಾರದ ಪಾತ್ರಯಾವುದೇ ಇಲ್ಲ.
ಚುನಾವಣೆಗೆ 15 ದಿನಗಳ ಮೊದಲು ಘೋಷಣೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿಸೆಂಬರ್ ವರೆಗೆ ಚುನಾವಣೆ ಬೇಡ ಅಂತಾ ಸರಕಾರ ಮನವಿ ಮಾಡಿತ್ತು. ಕೊವಿಡ್ ನಡುವೆ ಜಿ.ಪಂ ಮೀಸಲಾತಿ ಘೋಷಣೆಗೆ ಸಚಿವರು ಬೇಸರ ವ್ಯಕ್ತಪಡಿಸಿದ್ದು, ರಾಜ್ಯದಲ್ಲೆಡೆ ಈಗ ಮೀಸಲಾತಿ ಕುರಿತು ವಿರೋಧ ವ್ಯಕ್ತ ಆಗುತ್ತಿದೆ ಎಂದರು.
ಇಷ್ಟು ಬೇಗ ಮೀಸಲಾತಿ ಘೋಷಣೆ ಮಾಡಿದ್ದರಿಂದ ಅಭ್ಯರ್ಥಿಗಳು ಮನೆ ಮಠ ಮಾರಿಕೊಳ್ಳುತ್ತಾರೆ. ಚುನಾವಣೆ ಆಯೋಗ ಮೀಸಲಾತಿ ಘೋಷಣೆ ಮೊದಲು ಸರಕಾರದ ಸಲಹೆ ಕೇಳಬೇಕಿತ್ತು. ಸರ್ಕಾರ ಮೀಸಲಾತಿ ಕುರಿತು ಸಲಹೆ ನೀಡುತ್ತಿತ್ತು..
ಮೀಸಲಾತಿ ಘೋಷಣೆ ಆಗಿದೆ. ಈಗ ಅದನ್ನು ಪ್ರಶ್ನಿಸುವದಿಲ್ಲ.
ರಾಜ್ಯ ಸರ್ಕಾರ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುತ್ತದೆ. ಯುಪಿ ಫಲಿತಾಂಶ ರಾಜ್ಯದಲ್ಲೂ ಬರಲಿದೆ. ರಾಜ್ಯದಲ್ಲಿ ಜಿ ಪಂ ಚುನಾವಣೆ ಯಲ್ಲಿ ಬಿಜೆಪಿ ಪಕ್ಷ ಅತೀ ಹೆಚ್ಚುಸ್ಥಾನ ಗೆಲ್ಲಲಿದೆ ಎಂದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795
