ವಿಜಯ ಸಂಘರ್ಷ
ಭದ್ರಾವತಿ : ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್ಗೆ ಹೋದ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಜನ್ನಾಪುರದ ನಿವಾಸಿ ಮೋಹನ್ ಮೂರ್ತಿ(43) ಮೃತ ವ್ಯಕ್ತಿ.
ಮೋಹನ ಮೂರ್ತಿ ಶ್ರೇಯಸ್ ಕ್ಲಿನಿಕ್ಗೆ ಹಲ್ಲು ನೋವೆಂದು ಹೋಗಿದ್ದಾರೆ. ಈ ವೇಳೆ ಮೂರ್ತಿಗೆ ದಂತ ವೈದ್ಯ ಸತೀಶ್ ಚಂದನ್ ಹಲ್ಲು ಕೀಳಲು ಅನಸ್ತೇಶಿಯ ನೀಡಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಮೋಹನ್ ಮೂರ್ತಿ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ದಂತ ವೈದ್ಯ ಮೋಹನ್ ಮೂರ್ತಿಯನ್ನು ದುರ್ಗಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದುರಾದೃಷ್ಟವಶಾತ್ ಸಾವನ್ನಪ್ಪಿದ್ದಾರೆ.
ಮೃತರಿಗೆ ಪತ್ನಿ ಹಾಗೂ 12 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795