ಶ್ರೀ ಮಲ್ಲಿಕಾರ್ಜನ ದೇವಸ್ಥಾನ ಜೀರ್ಣೊದ್ದಾ ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸಹಾಯಧನ

 

ವಿಜಯ ಸಂಘರ್ಷ



ತೀರ್ಥಹಳ್ಳಿ :ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ವಿಭಾಗದಿಂದ 5 ಲಕ್ಷ ರೂಗಳ ಸಹಾಯಧನವನ್ನು ಸಮುದಾಯ ವಿಭಾಗದ ಪ್ರಾದೇಶಿಕ ನಿದೇಶಕ ಆನಂದ ಸುವರ್ಣ ದೇವಸ್ಥಾನ ಸಮಿತಿ ಅಧ್ಯಕ್ಷ  ಗೋಪಾಲಕೃಷ್ಣ ರವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಸಮುದಾಯ ವಿಭಾಗದ ಯೋಜನಾಧಿಕಾರಿ ಪುಷ್ಪರಾಜ್ ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ತಾಲೂಕು ಯೋಜನಾಧಿಕಾರಿ ಹೇಮಲತಾ , ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಸನ್ನ, ಮನೋಹರ, ಎನ್ ಟಿ ಸುರೇಶ್, ದಿನೇಶ ಅರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ  ಭಾಸ್ಕರ್ ಒಕ್ಕೂಟದ ಅಧ್ಯಕ್ಷ ರವಿಂದ್ರ, ಶ್ವೇತಾ,ದೇವಸ್ಥಾನದ ಪ್ರಧಾನ ಅರ್ಚಕ ಪ್ರದೀಪ್ ಭಟ್ಟರು, ಅರ್ಚಕ ವಿಶ್ವನಾಥ ಭಟ್ಟರು ಉಪಸ್ಥಿತರಿದ್ದರು.

✍️ :ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು