ಭದ್ರಾವತಿ-ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಆಗ್ರಹಿಸಿ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲೂಕು ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿ, ಕೆರೆ ಅಂಗಳ ಮಂಜೂರಾತಿ ಹಾಗೂ ಕಾನೂನು ಬಾಹಿರ ಭೂ ವರ್ಗಾವಣೆಗಳ ವಿರುದ್ಧ ತನಿಖೆಗೆ ಆಗ್ರಹಿಸಿ 'ಭದ್ರಾವತಿ ಉಳಿಸಿ ಹೋರಾಟ ವೇದಿಕೆ' ವತಿಯಿಂದ ಬುಧವಾರ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು.

     ತಾಲೂಕು ಕಚೇರಿಯ ಕಂದಾಯ ವಿಭಾಗ ದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮಗಳು ತಾಂಡವವಾಡು ತ್ತಿದ್ದು, ಬಡವರು ಹಾಗೂ ಅರ್ಹ ಫಲಾನುಭವಿಗಳಿಗೆ ತೀವ್ರ ಅನ್ಯಾಯ ವಾಗುತ್ತಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.

    ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ, ಪ್ರಭಾವಿ ಮಧ್ಯವರ್ತಿಗಳ ಹಾಗೂ ಹಣಬಲ ಉಳ್ಳವರ ಜೊತೆ ಶಾಮೀಲಾಗಿ ಭೂ ಮಂಜೂರಾತಿ ಯಲ್ಲಿ ಸಾಲು ಸಾಲು ಅಕ್ರಮಗಳನ್ನು ಎಸಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕಿಡಿ ಕಾರಿದರು.

     ತಾಲೂಕು ಕಚೇರಿಯಲ್ಲಿ ನಡೆಯುತ್ತಿ ರುವ ಪ್ರಮುಖ ಅಕ್ರಮಗಳು:
ಅಕ್ರಮ ಬಾಗಾಯ್ತು ಹಾಗೂ ಸಾಗು ವಳಿ ಚೀಟಿ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಫಾರಂ 53 ಮತ್ತು ಫಾರಂ 57ರ ಅರ್ಜಿಗಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅರ್ಹ ಬಡ ರೈತರಿಗೆ ಹಕ್ಕುಪತ್ರ ನೀಡದೆ. ಕೇವಲ ಲಂಚ ಮತ್ತು ಹಣ ಕೊಟ್ಟವರಿಗೆ ಮಾತ್ರ ಅಕ್ರಮ ವಾಗಿ ದಾಖಲೆಗಳನ್ನು ಮಾಡಿಕೊಡ ಲಾಗುತ್ತಿದೆ ಎಂದು ಆರೋಪಿಸಿದರು.

    ಪ್ರಮುಖ ಬೇಡಿಕೆಗಳು:
ಕಳೆದ ಕೆಲವು ವರ್ಷಗಳಿಂದ ಫಾರಂ 53 ಮತ್ತು 57ರ ಅಡಿಯಲ್ಲಿ ನಡೆದಿರುವ ಎಲ್ಲಾ ಭೂ ಮಂಜೂರಾತಿ ಕಡತ ಗಳನ್ನು ಮರುಪರಿ ಶೀಲನೆಗೆ ಒಳಪಡಿ ಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು.

   ಕೆರೆ ಅಂಗಳ, ಗೋಮಾಳ ಹಾಗೂ ಫೋರ್ಜರಿ ದಾಖಲೆಗಳ ಮೂಲಕ ಮಂಜೂರು ಮಾಡಿಕೊಂಡಿರುವ ಎಲ್ಲಾ ಅಕ್ರಮ ಭೂ ಮಂಜೂರಾತಿಗಳನ್ನು ತಕ್ಷಣವೇ ರದ್ದುಗೊಳಿಸಿ, ಜಮೀನನ್ನು ಸರ್ಕಾರಿ ಸುಪರ್ದಿಗೆ ಪಡೆಯಬೇಕು.
ನಕಲಿ ದಾಖಲೆ ಸೃಷ್ಟಿಸಲು ಮತ್ತು ಫೋರ್ಜರಿ ಮಾಡಲು ಸಹಕರಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ಗ್ರಾಮ ಆಡಳಿತಾಧಿ ಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು.

     ತಾಲೂಕು ಕಚೇರಿಯಲ್ಲಿ ನಡೆಯು ತ್ತಿರುವ ಈ ಭೂ ದಂಧೆಗೆ ತಕ್ಷಣವೇ ತಡೆಹಾಕಿ, ಪ್ರಜಾಪ್ರಭುತ್ವ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕ ಆಡಳಿತ ನೀಡಬೇಕಾಗಿ ಒತ್ತಾಯಿಸಿದರು.

    ಶಾಸಕರ ಕುಟುಂಬದ ಪ್ರಭಾವಕ್ಕೆ ಒಳಗಾಗಿ ಸುಳ್ಳು ಪ್ರಕರಣ ದಾಖಲಿಸುವ ಹಾಗು ಅಕ್ರಮಗಳಿಗೆ ಬೆಂಬಲ ನೀಡುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತುಕ್ರಮ ಜರುಗಿಸುವುದು, ಸ್ನೇಹಜೀವಿ ಪೊಲೀಸ್ ಉಮೇಶ್ ಹಾಗು ಅವರ ಅಣ್ಣನ ಮಗನ ವಿರುದ್ಧ ದಾಖಲಿಸ ಲಾಗಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. 

     ಕ್ಷೇತ್ರದಲ್ಲಿ ಗೂಂಡಾಗಿರಿ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಖುದ್ದಾಗಿ ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಆಗ್ರಹಿಸಿದರು.

     ಭದ್ರಾವತಿ ಉಳಿಸಿ ಹೋರಾಟ ವೇದಿಕೆಯ ಸಂಚಾಲಕ ಅರುಣ್ ಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ರಾಜ್ಯಕಾರ್ಯದರ್ಶಿ ಶಾರದಾ ಅಪ್ಪಾಜಿ, ಮುಖಂಡರಾದ ಆರ್. ಕರುಣಾಮೂರ್ತಿ, ಅಜಿತ್ ಅಪ್ಪಾಜಿ, ಚಂದ್ರೇಗೌಡ, (ಗಿಡ್ಡ) ರಾಮಕೃಷ್ಣ, ಆನಂದ್, ಮೋಹನ್ ರಾವ್, ಬಿಜೆಪಿ ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಕೆ.ಎಚ್.ತೀರ್ಥಯ್ಯ ಸೇರಿದಂತೆ ಅನೇಕರು ಪ್ರತಿಭಟನೆ  ಯಲ್ಲಿ ಪಾಲ್ಗೊಂಡಿದ್ದರು.

  ಸ್ಥಳಕ್ಕಾಗಿಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಮನವಿ ಸ್ವೀಕರಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು