ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯ, ಶಾಲಾ-ಕಾಲೇಜು ಗಳ ಅವ್ಯವಸ್ಥೆ ಖಂಡಿಸಿ ಮತ್ತು ರೈತರ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಕ್ಷೇತ್ರದ ಹಲವು ಸಮಸ್ಯೆಗಳ ಈಡೇರಿಕೆಗೆ ಅಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಕಳೆದ 7-8 ತಿಂಗಳಿನಿಂದ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಸಾರ್ವ ಜನಿಕರ ಕುಂದು-ಕೊರತೆ ಸಭೆಗಳನ್ನು ನಡೆಸಿ ಅಹವಾಲುಗಳನ್ನು ಸ್ವೀಕರಿಸದಿ ರುವುದು ಖಂಡನೀಯ ವಾಗಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆ ಎಂದು ದೂರಲಾಯಿತು. ತಕ್ಷಣ ರಾಜ್ಯ ಉಪ ಲೋಕಾಯುಕ್ತರು, ನ್ಯಾಯಮೂರ್ತಿ ಬಿ. ವೀರಪ್ಪರವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿ ಎಲ್ಲಾ ಇಲಾಖೆ ಗಳ ಕಡತಗಳನ್ನು ಪರಿಶೀಲನೆ ಮಾಡಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ರಾಜ್ಯದಲ್ಲಿ ಬಡವರಿಗೆ ನೀಡುತ್ತಿರುವ ವಿವಿಧ ಪಿಂಚಣಿಗಳು ರದ್ದಾಗಿದ್ದು, ನಿಜವಾದ ಬಡವರಿಗೆ ಕೂಡಲೇ ಪಿಂಚಣಿ ಮುಂದುವ ರಿಸಬೇಕು. ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾ ರಿಗಳ ಕಚೇರಿ ಪಕ್ಕದ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದ ಜಾಗವನ್ನು ಖಾಸಗಿ ಯವರು ಲೂಟಿ ಮಾಡಲು ಸಂಚು ನಡೆಸಿದ್ದು, ತಕ್ಷಣ ಉದ್ಯಾನ ವನ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡ ಬೇಕು. ಉರ್ದು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಊಟದ ಕೊಠಡಿ, ಶೌಚಾಲಯ ದುರಸ್ತಿಪಡಿಸಬೇಕೆಂದು ಒತ್ತಾಯಿಸಲಾಯಿತು.
ಕಲ್ಲಾಪುರ ಗ್ರಾಮದ ರಂಗಾಪುರ ಸರ್ವೆ ನಂಬರ್ 1 ರಲ್ಲಿ 74 ಎಕರೆ ಕಂದಾಯ ಜಮೀನಿದ್ದು, ಅನೇಕ ವರ್ಷಗಳಿಂದ ಸಾಗು ಮಾಡುತ್ತಿದ್ದ 24 ಜನ ರೈತರ ಫಾರಂ 57 ಕ್ರಮ ಖಂಡಿಸಿ, ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಲೇ ಬಸಾಪುರ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ನಿವೇಶನ ರಹಿತ ರೈತರಿಗೆ ತಕ್ಷಣ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ, ಡಿಬಿ ಹಳ್ಳಿ ಗ್ರಾಮದ ಎಡೇಹಳ್ಳಿ ಸರ್ವೆ ನಂಬರ್ 66 ರಲ್ಲಿ ಅರಣ್ಯವಿಲ್ಲ ದಿದ್ದರೂ ಸರ್ಕಾರ ಮಂಜೂರು ಮಾಡಿದ ಪಹಣಿಗಳನ್ನು ವಜಾ ಮಾಡಿದ್ದು, ತಕ್ಷಣ ಅದೇ ಜಾಗದಲ್ಲಿ ಮರು ಮಂಜೂರು ಮಾಡಬೇಕೆಂದು ಆಗ್ರಹಿಸಿ, ದಾನವಾಡಿ ಗ್ರಾಮದ ಸರ್ವೆ ನಂಬರ್ 29ರಲ್ಲಿ ಸಾಗುವಳಿ ಮಾಡುತ್ತಿದ್ದ ಹುಲ್ಲು ಬನಿ ಜಾಗದಲ್ಲಿ ಅರಣ್ಯ ಅಧಿಕಾರಿಗಳು ಬಡ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಕ್ರಮ ಖಂಡಿಸಲಾಯಿತು.
ಮುಂಗೋಟೆ ಗ್ರಾಮದ ನಿವಾಸಿ ಗಳಿಗೆ ಹಕ್ಕುಪತ್ರ ನೀಡಿ, ಸರ್ಕಾರಿ ಹಕ್ಕು ಪತ್ರಗಳ ಕಡತವನ್ನು ಕಳೆದು ಹಾಕಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿ, ಎಂಪಿಎಂ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಎಲ್ಐಸಿ ಹಣ ಕೋಟ್ಯಾಂತರ ಲೂಟಿ ಮಾಡಿದ ಎಲ್ಐಸಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸದ ಪೊಲೀಸರ ಕ್ರಮ ಖಂಡಿಸಿ, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿ ಗಳು ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನೇತೃತ್ವವಹಿಸಿದ್ದರು. ಉಪಾಧ್ಯಕ್ಷರಾದ ಸೋಮಣ್ಣ, ಎಂ.ವಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕರಾದ ಶ್ರೀಧರ್, ಏಕಾಂತಪ್ಪ, ವರಲಕ್ಷ್ಮಿ, ನೀಲಮ್ಮ, ವಿಶಾಲಾಕ್ಷಿ ಮತ್ತು ವೇದಾವತಿ ಹಾಗೂ ಎಂ.ಪಿ.ಎಂ ನೊಂದ ನಿವೃತ್ತ ಕಾರ್ಮಿಕರ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಸೇರಿದಂತೆ ನಿವೃತ್ತ ಕಾರ್ಮಿಕರು, ಇನ್ನಿತರರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.