ಭದ್ರಾವತಿ-ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ಬಿಜೆಪಿ ಪ್ರತಿಭಟನೆ: ಡಿವೈಎಸ್ ಪಿ ಕಛೇರಿಗೆ ಮುತ್ತಿಗೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆ ಗಳು, ಅಪರಾಧ ಪ್ರಕರಣಗಳನ್ನು ನಿಯಂತ್ರಿಸು ವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಗುರುವಾರ ಡಿವೈಎಸ್ ಪಿ ಕಛೇರಿ ಬಳಿ ಬಿಜೆಪಿ ನಗರ ಹಾಗು ಗ್ರಾಮಾಂತರ ಮಂಡಲದಿಂದ ಪ್ರತಿಭಟನೆ ನಡೆಸಲಾಯಿತು. 
    ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಓ.ಸಿ ಮಟ್ಕಾ, ಇಸ್ಪೀಟ್ ಸೇರಿದಂತೆ ಜೂಜಾಟ ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಮಿತಿಮೀರಿ ರುವ ಗಾಂಜಾ ಸೇವನೆ ಹಾಗು ಮಾರಾಟಕ್ಕೆ ಸಂಪೂರ್ಣ ವಾಗಿ ಕಡಿವಾಣ ಹಾಕಿ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲಾ- ಕಾಲೇಜುಗಳ ಬಳಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕೆಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ ಕಾರಿಯಪ್ಪ ಅವರಿಗೆ ದೂರು ಸಲ್ಲಿಸಲಾಯಿತು. 

    ಅಕ್ರಮವಾಗಿ ಸುಲಭರೀತಿಯಲ್ಲಿ ಹಣ ಗಳಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಯುವಕರು ಓಸಿ ಇಸ್ಪೀಟ್ ಜೂರು ಮಟ್ಕಾ ಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ಬೀದಿ ಪಾಲಾಗುವುದರ ಜೊತೆಗೆ ಸಮಾಜ ಕಂಠಕರಾಗುತ್ತಿದ್ದಾರೆ. ಅನೇಕ ಸಂದರ್ಭ ಗಳಲ್ಲಿ ಭದ್ರಾವತಿಯಲ್ಲಿ ನಡೆಯುತ್ತಿರುವ ಎಲ್ಲಾ ಒಡೆದಾಟ ಬಡಿದಾಟ ಕೊಲೆ ಪ್ರಯತ್ನಗಳಿಗೆ ಓಸಿ ಇಸ್ಪೀಟ್ ಮಟ್ಕಾ ದಂದೆಗಳೇ ಇವುಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

     ಎಲ್ಲೆಂದರಲ್ಲಿ ಬೀಡಿ ಸಿಗರೇಟ್ ಗಳಿಗಿಂತ ಸುಲಭವಾಗಿ ಗಾಂಜಾ ದೊರೆಯುತ್ತಿರು ವುದು, ಗಾಂಜಾ ಸೇವಿಸಿಕೊಂಡು ರಸ್ತೆಗಳಲ್ಲಿ ಸಾರ್ವಜನಿಕರನ್ನು ಭಯಭೀತಿ ಗೋಳಿಸುತ್ತಾ ವಾಹನ ಗಳನ್ನು ಅತಿ ವೇಗವಾಗಿ ಮತ್ತು ಕರ್ಕಶ ಶಬ್ದ ದೊಂದಿಗೆ ಚಾಲನೆ ಮಾಡುವವರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ. ಕಾರಣ ಇವರೆಲ್ಲರ ಹಿಂದೆ ರಾಜಕಾರಣಿ ಗಳ ಕೃಪಾಕಟಾಕ್ಷ ಹಾಗೆ ಗಾಂಜಾ ಸೇವನೆ ಮಾಡಿದವರ ಮೇಲೆ ಪ್ರಕರಣ ದಾಖಲಿಸುತ್ತಿರುವುದು ಸರಿಯಷ್ಟೇ, ಆದರೆ ಇವರಿಗೆ ಗಾಂಜಾ ಎಲ್ಲಿ ದೊರೆಯುತ್ತಿದೆ,ಯಾರು ಮಾರಾಟ ಮಾಡುತ್ತಿದ್ದಾರೆ ಇದರ ಹಿಂದೆ ಇರುವ ಜಾಲ ಯಾವುದು ಎಂದು ಹುಡುಕಿ ಇಂದಿನವರೆಗೆ ಕೇಸು ದಾಖಲಿಸಿಕ್ರಮ ಕೈಗೊಂಡಿರುವ ಉದಾಹರಣೆಗಳೇ ವಿರಳ ಎಂದರು.

    ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಜಿ. ಆನಂದ ಕುಮರ್, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಚನ್ನೇಶ್, ರಘುರಾವ್, ಮೊಸರಹಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಸರಸ್ವತಿ ವಿಜಯ್ ಕುಮಾರ್ ಸೇರಿದಂತೆ ಮಂಡಲದ ಪದಾಧಿಕಾರಿ ಗಳು, ವಿವಿಧ ಮೋರ್ಚಾಗಳ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತೆ ಯರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು