ಭದ್ರಾವತಿ-ಆಧುನಿಕ ಕಾಲದಲ್ಲಿ ಜಾನಪದ ಕಲೆಗಳು ಕ್ಷೀಣಿಸುತ್ತಿರುವುದು ವಿಷಾಧನಿಯ: ಹೆಚ್.ತಿಮ್ಮಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಆಧುನಿಕ ಕಾಲದಲ್ಲಿ ಜಾನಪದ ಕಲೆಗಳ ಪ್ರದರ್ಶನ ಕ್ಷೀಣಿಸುತ್ತಿರುವುದು ವಿಷಾಧನಿಯ. ಇಂದಿನ ಯುವ ಜನತೆಗೆ ಜಾನಪದ ಕಲೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ ಹೆಚ್.ತಿಮ್ಮಪ್ಪ ಹೇಳಿದರು.

      ಅವರು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಾನಪದ ಕಲಾಸಂಘ, ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗ ದಲ್ಲಿ ತಾಲ್ಲೂಕಿನ ಹಳ್ಳಿಕೆರೆ ಗ್ರಾಮದ ಸಂತ ಡೋಮಿನಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನಪದ ಕಲಾವಿದ ರಘುಕುಮಾರ್ ಮತ್ತು ತಂಡ ಎಮ್ಮೆಹಟ್ಟಿ ಇವರಿಂದ ಡೊಳ್ಳು ಕುಣಿತ ಪ್ರದರ್ಶನ ಕಾರ್ಯ ಕ್ರಮವನ್ನು ಡೊಳ್ಳು ವಾದ್ಯವನ್ನು ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಜಾನಪದ ಕಲೆಗಳಲ್ಲಿ ಡೊಳ್ಳು ಕುಣಿತ ಗಂಡುಕಲೆ ಎಂದೇ ಪ್ರಸಿದ್ದಿ ಯಾಗಿದೆ.ಜಾನಪದ ಕಲೆಗಳು ಉಳಿಸಿ ಬೆಳಸಬೇಕು. ಹಾಗಾಗಿ ವಿದ್ಯಾರ್ಥಿ ಗಳಿಗೆ ಜಾನಪದ ಕಲೆಗಳ ಪರಿಚಯ ಅತ್ಯಗತ್ಯ ಎಂದರು. 

    ಸಂತ ಡೋಮಿನಿಕ್ ಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಜೆನ್ಫಿ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ರೀತಿಯ ಕಾರ್ಯಕ್ರಮ ಮೊದಲ ಬಾರಿ ಬಹಳ ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಶಾಲೆಗಳಲ್ಲಿ ಆಗಬೇಕು ಎಂದರು.

     ಅಂಬೇಡ್ಕರ್ ಜಾನಪದ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

     ಪ್ರವೀಣ್ ಕುಮಾರ್.ಬಿ ಪ್ರಾರ್ಥಿಸಿ,
ಮೋಕ್ಷ ಸ್ವಾಗತಿಸಿದರೆ,ಶಾಲಿನಿ ವಸಂತ್ ಕುಮಾರ್ ನಿರೂಪಿಸಿದರು.

    ಹಿರಿಯ ರಂಗ ಕಲಾವಿದರಾದ ಕೆ.ಎಸ್. ರವಿಕುಮಾರ್, ಬಿ.ಕಮಲಾಕರ.ಸಂಘದ ಪದಾಧಿಕಾರಿ ಗಳಾದ ಹಿರಿಯ ರಂಗ ಕಲಾವಿದರಾದ ರವಿಕುಮಾರ್.ಜಿ ,ರಾಜೇಶ, ಶಾಲೆಯ ಬೋಧಕ ವರ್ಗ, ಸಿಬ್ಬಂದಿ ವರ್ಗ, ಶಾಲಾ ಮಕ್ಕಳು ಮತ್ತು ಪೋಷಕ ವರ್ಗದವರು ಪ್ರೇಕ್ಷಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು