ವಿಜಯ ಸಂಘರ್ಷ
ಭದ್ರಾವತಿ : ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ನೇತೃತ್ವದಲ್ಲಿಂದು ಸರ್ಕಾರಿ ನೌಕರರ ಸಂಘ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಹಯೋಗದೊಂದಿಗೆ ಕೋವಿಡ್ ಹಿನ್ನೆಲೆಯಲ್ಲಿ ಬಡವರಿಗೆ ಉಚಿತ ಆಹಾರ ಕಿಟ್ ಗಳನ್ನ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಮೂಲಕ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಶಾಸಕರು ಇದೇ ಪ್ರಥಮವಾಗಿ ತಾಲೂಕು ನೌಕರರ ಸಂಘವು ಸಂಕಷ್ಟದಲ್ಲಿರುವ ಜನತೆಗೆ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂದಿರುವುದು ಸಂತಸದ ವಿಚಾರ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಸಿದ್ದಬಸಪ್ಪನವರ ನೇತೃತ್ವದಲ್ಲಿ ಇಂತಹ ಸಮಾಜಮುಖಿ ಕೆಲಸ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಶುಭಕೋರಿದ ಅವರು ಸಾಮಾಜಿಕ ಕಾರ್ಯಗಳಿಗೆ ಸದಾ ತಮ್ಮ ಬೆಂಬಲವಿರುತ್ತದೆ. ನೌಕರರ ಸಂಘಕ್ಕೆ ಬೆಂಬಲಿಸಿದ ಮಲಬಾರ್ ಗೋಲ್ಡ್ ಡೈಮಂಡ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ,
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795