ವಿಜಯ ಸಂಘರ್ಷ
ತೀರ್ಥಹಳ್ಳಿ: ಮಲೆನಾಡಿನ ಸ್ವರ್ಗ ಕರ್ನಾಟಕದ ಚಿರಾಪುಂಜಿ ಎಂದೆಲ್ಲಾ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ಆಗುಂಬೆ ಪ್ರವಾಸಿಗರ ನೆಚ್ಚಿನ ತಾಣ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗುಂಬೆಗೆ ಭೇಟಿ ನೀಡುತ್ತಾರೆ.
ಆದರೆ ಇಲ್ಲಿ ವಾಸಿಸುವ ಜನರ ಪಾಡು ಮಾತ್ರ ನರಕಯಾತನೆ ಕಾಡುಕೋಣಗಳ ನಿರಂತರ ಹಾವಳಿ, ರೈತರ ನಿದ್ದೆಗೆಡಿಸಿದೆ. ಸರ್ಕಾರವಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ರೈತರ ನೆರವಿಗೆ ಧಾವಿಸಿಲ್ಲ ಕಾಡುಕೋಣಗಳ ಹಾವಳಿಯಿಂದ ಹಾಳಾದ ಫಸಲಿಗೆ ಸಮರ್ಪಕವಾದ ಪರಿಹಾರವನ್ನು ಘೋಷಿಸಿಲ್ಲ. ಶಾಸಕ ಆರಗ ಜ್ಞಾನೇಂದ್ರ ಕಾಡುಪ್ರಾಣಿಗಳ ಹಾವಳಿ ಬಗ್ಗೆ ವಿಧಾನಸೌಧದಲ್ಲಿ ಇದರ ವಿರುದ್ಧ ಧ್ವನಿಯೆತ್ತಿದ್ದರು.
ಆ ಸಮಯದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕೂಡ ಸೂಕ್ತ ಸ್ಪಂದನೆ ವ್ಯಕ್ತಪಡಿಸಿದ್ದರು. ಆದರೆ ನಂತರ ಕೊರೋನಾ ಸಾಂಕ್ರಮಿಕ ಕಾಯಿಲೆ ತೀವ್ರವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿಂತು ಹೋಯಿತು. ಶಾಸಕರು ಇದರ ಬಗ್ಗೆ ಮತ್ತೆ ಧ್ವನಿಯೆತ್ತಲಿ ಆಗುಂಬೆ ಭಾಗದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿ ಎನ್ನುವುದು ಸ್ಥಳೀಯರ ಆಶಯ.
ಇಲ್ಲಿ ನಿರಂತರವಾಗಿ ವಿದ್ಯುತ್ ಇರುವುದಿಲ್ಲ. ವಿದ್ಯಾರ್ಥಿಗಳಿಗಂತೂ ಕಷ್ಟಕರ ಪರಿಸ್ಥಿತಿಯಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಆಗುಂಬೆ ಜನತೆ ಮಾತ್ರ ಎಲ್ಲಾ ನೋವುಗಳನ್ನು ನುಂಗಿಕೊಂಡು ಜೀವನ ಸಾಗಿಸುತ್ತಿ ದ್ದಾರೆ. ಇವೆಲ್ಲ ಸಮಸ್ಯೆಗಳ ಮಧ್ಯೆ ಮುಖ್ಯರಸ್ತೆಯ ಪಂಚಾಯಿತಿ ಮುಂಭಾಗ ಮಳೆಯ ನೀರು ರಸ್ತೆಯ ನಿಂತಿರುವುದು ದುರಂತವೇ ಸರಿ. ಸಂಬಂಧಿತ ಅಧಿಕಾರಿಗಳು ನೋಡಿಯೂ ಮೌನ ವಹಿಸಿರುವುದುದುರಂತವೆ ಸರಿ. ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ನೀರು ಸರಾಗವಾಗಿ ಚರಂಡಿಗೆ ಹೋಗುವಂತೆ ಮಾಡಿ ಪುಣ್ಯಕಟ್ಟಿಕೊಳ್ಳಿ ಎನ್ನುವುದು ಆಗುಂಬೆ ಭಾಗದ ಜನರ ಮನವಿ .
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795