ವ್ಯಸನ ಮುಕ್ತ ವಿದ್ಯಾರ್ಥಿ ದೇಶಕ್ಕೊಂದು ಆರತಿ: ಜೆ. ಎನ್.ಬಸವರಾಜಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ವಿದ್ಯಾರ್ಥಿಗಳಲ್ಲಿ ಗೌಪ್ಯ ವಾಗಿ ಮಾದಕ ವಸ್ತು ವ್ಯಸನ ಹೆಚ್ಚಾಗುತ್ತಿದೆ. ಈ ಕುರಿತು ಸೂಕ್ತ ಸಮಯದಲ್ಲಿ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಿದರೆ ವ್ಯಸನ ಮುಕ್ತ ಭಾರತ ಕಟ್ಟಬಹುದು ಎಂದು ಸಾಹಿತಿ ಜೆ. ಎನ್. ಬಸವರಾಜಪ್ಪ ಅಭಿಪ್ರಾಯಪಟ್ಟರು.              
 
ಅವರು ಜನ್ನಾಪುರದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳದ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ಮುಕ್ತ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಮನೆಯಿಂದಲೇ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿತುಕೊಳ್ಳ ಬೇಕು ಮನೆಯಲ್ಲಿ ಪೋಷಕರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದರ ಬಗ್ಗೆ ತಿಳಿಸಬೇಕು. ಶಾಲೆಯಲ್ಲಿಯೂ ಕೂಡ ಶಿಕ್ಷಕರು ವಿದ್ಯಾರ್ಥಿಗಳ ಚಲನ ವಲನದ ಕಡೆ ಸೂಕ್ಷ್ಮ ನಿಗಾ ಎಡಬೇಕು ಎಂದು ಕಿವಿಮಾತು ಹೇಳಿದರು.

" ವ್ಯಸನ ಮುಕ್ತ ವಿದ್ಯಾರ್ಥಿ ನಮ್ಮ ದೇಶಕ್ಕೊಂದು ಆರತಿ "ಎಂದು ಹೇಳಿದ ಬಸವರಾಜಪ್ಪ ಯಾವುದು " ನಮ್ಮ ದೇಹಕ್ಕೆ ಹಿತಕರವೋ ಅದು ಮೋದಕ. ಯಾವುದು ನಮ್ಮ ದೇಹಕ್ಕೆ ಅಹಿತ ಕರವೋ ಅದೇ ಮಾದಕ" ಎಂದು ಸ್ವರಚಿತ ಚುಟುಕನ್ನು ಸ್ಥಳದಲ್ಲಿಯೇ ವಾಚಿಸಿ ವಿದ್ಯಾರ್ಥಿಗಳ ಗಮನವನ್ನು ಸೆಳೆದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಲತಾ ಕುಮಾರಿ ಮಾತನಾಡಿ ಇಂತಹ ಕಾರ್ಯ ಕ್ರಮಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ವಿಷಯ ವನ್ನು ಅರಿತು ಕೊಳ್ಳಬೇಕು. 
ಚಿಕ್ಕ ವಯಸ್ಸಿನಲ್ಲಿ ದುಶ್ಚಟವನ್ನು ಮಾಡಬಾರದು.ಅಪರಿಚಿತ ವ್ಯಕ್ತಿಗಳು ತಿನ್ನಲು ಏನನ್ನಾದರೂ ಕೊಟ್ಟರೆ ಅವರಿಂದ ತೆಗೆದುಕೊಳ್ಳಬಾರದು ಎಂದು ಮಕ್ಕಳಿಗೆ ತಿಳಿ ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ತಿಳಿಸಲಾದ ಎಲ್ಲಾ ವಿಷಯಗಳನ್ನು ಮಕ್ಕಳು ಅರಿತುಕೊಂಡು ಅದರಂತೆ ನಡೆಯಬೇಕು ಎಂದು ಕಾರ್ಯಕ್ರಮ ವನ್ನು ಆಯೋಜಿಸಿ ದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಎಲ್. ಬಿ. ಶೇಖರಪ್ಪ, ಸಂಘಟನೆಯ ಮೇಲ್ವಿಚಾರಕ ದಯಾನಂದ, ಆಂತರಿಕ ಲೆಕ್ಕ ಪರಿಶೋಧಕ ಅಶೋಕ್, ಕರಿಬಸವ ಸ್ವಾಮಿ ಮತ್ತು ವೀಣಾ ಹಾಗೂ ವಿಜಯ ರವರು ಉಪಸ್ಥಿತರಿದ್ದರು. 
8 - 9 ಹಾಗೂ 10ನೇ ತರಗತಿಯ ವಿದ್ಯಾರ್ಥಿ ಗಳು ಕಾರ್ಯಕ್ರಮವನ್ನು ಆಸಕ್ತಿಯಿಂದ ಆಲಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಸಂಘಟಕರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು