ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಜಿಲ್ಲೆಯಾದ್ಯಂತ ನಡೆಯುತ್ತಿ ರುವ ವಿಶೇಷ ತೀವ್ರ ಪರಿಷ್ಕರಣ ಪಟ್ಟಿಯಲ್ಲಿ ಜಿಲ್ಲೆಯ ಎಲ್ಲಾ ಮತದಾರ ರನ್ನು ಸೇರಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಸಕ್ರಿಯ ವಾಗಿ ಭಾಗವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿ ಸದಸ್ಯರು ಹಾಗೂ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ರಾದ ಎಂ ಶ್ರೀಕಾಂತ್ ಕರೆ ನೀಡಿದರು.
ಅವರು ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗವು ಎಲ್ಲಾ ಬ್ಲಾಕ್ ಗಳ ಹಾಗೂ ಜಿಲ್ಲಾ ಪದಾಧಿಕಾರಿ ಗಳಿಗಾಗಿ ಏರ್ಪಡಿಸಿದ್ದ ಎಸ್ಐಆರ್ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ಐಆರ್ ಕಬ್ಬಿಣದ ಕಡಲೆಯಲ್ಲ. ಅದರ ಬಗ್ಗೆ ಇಂದು ನೀಡುತ್ತಿರುವ ತರಬೇತಿಯಲ್ಲಿ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ತಮ್ಮ ತಮ್ಮ ತಾಲೂಕು ಗಳಲ್ಲಿ ಬಿಎಲ್ ಎ ಜೊತೆ ಸೇರಿ ಯಾವುದೇ ಒಬ್ಬ ಮತದಾರರು ಮತದಾರರ ಪಟ್ಟಿ ಯಿಂದ ಹೊರಗೆ ಉಳಿಯದಂತೆ ನೋಡಿ ಕೊಳ್ಳ ಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಇವರು ಎಸ್ಐಆರ್ ಕುರಿತು ಬ್ಲಾಕ್ ಅಧ್ಯಕ್ಷರು ಗಳಿಗೂ ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ ತರಬೇತಿ ನೀಡಿ ಮಾತನಾಡಿದ ಅವರು ಮತ ಪರಿಷ್ಕರಣೆಯಲ್ಲಿ ತೊಡಗಿರುವ ಅಧಿಕಾರಿ ಗಳೊಂದಿಗೆ ಸಮನ್ವತೆಯನ್ನು ಸಾಧಿಸಿ ಈ ಎಸ್ಐಆರ್ ಅಭಿಯಾನ ವನ್ನು ಯಶಸ್ವಿ ಗೊಳಿಸಬೇಕು ಹಾಗೂ ಪದಾಧಿಕಾರಿಗಳ ಬೂತ್ ನಲ್ಲಿ ನೂರಕ್ಕೆ ನೂರರಷ್ಟು ಮತ ಪರಿಷ್ಕರಣೆ ನಡೆಯುವಂತೆ ಜಾಗೃತೆ ವಹಿಸಬೇಕೆಂದು ತಿಳಿಸಿದರು.
ಶಿಬಿರದಲ್ಲಿ ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಉಮಾಪತಿ, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷರು ಗಳಾದ ಪಾಲಾಕ್ಷ, ಅಶೋಕ್ ಕುಮಾರ್, ಮುದ್ದಪ್ಪ, ಶ್ರೀಕಾಂತ್, ದಿನೇಶ್ ತಳ್ಳಿಕಟ್ಟೆ, ಚೈತ್ರ ಮೋಹನ್ ಹಾಗೂ ಜಿಲ್ಲೆಯ ಎಲ್ಲಾ ಬ್ಲಾಕ್ ಗಳ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿ ಗಳು ಭಾಗವಹಿಸಿದ್ದರು.