ಅನ್ ಲಾಕ್ ನಂತರದ ದಿನಗಳಲ್ಲಿ ಕೊರೋನಾ ಸೋಂಕು ಸಂಖ್ಯೆ ಕಡಿಮೆ

 


ವಿಜಯ ಸಂಘರ್ಷ 


ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು 88 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಹೆಲ್ತ್ ಬ್ಯುಲಿಟಿನ್ ತಿಳಿಸಿದೆ.


5050 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 3892 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗು ಸೋಂಕಿನಿಂದ ಸಾವಿನ್ನಪ್ಪಿ ದವರ ಸಂಖ್ಯೆ 1026 ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಓರ್ವ  ಸೋಂಕಿನಿಂದ ಸಾವನ್ನಪ್ಪಿದ್ದಾರೆ.


110 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 103 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 87 ಜನ ಸೋಂಕಿನಿಂದ ದಾಖಲಾಗಿ ದ್ದಾರೆ. 317 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 763 ಜನರಲ್ಲಿ ಸೋಂಕು ಸಕ್ರಿಯವಾಗಿದೆ.


ಶಿವಮೊಗ್ಗ ನಗರದಲ್ಲಿ 38 ಜನರಿಗೆ ಪಾಸಿಟಿವ್ ಬಂದಿದೆ. 

ಭದ್ರಾವತಿ 11 

ಶಿಕಾರಿಪುರ -04, 

ತೀರ್ಥಹಳ್ಳಿ-21 

ಸೊರಬ-02,

 ಹೊಸನಗರ-04,

 ಸಾಗರದಲ್ಲಿ -11 ಹಾಗೂ ಹೊರಜಿಲ್ಲೆಯಿಂದ ಬಂದ 04 ರಲ್ಲಿ ಪಾಸಿಟಿವ್ ಕಂಡು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು