ವಿ
ಜಯ ಸಂಘರ್ಷ
ಬೆಂಗಳೂರು: ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಹೊಸ ಚಿತ್ರವೊಂದು ಸೆಟ್ಟೇರಲಿದೆ. ಚಿತ್ರದ ಸ್ಕ್ರಿಪ್ಟ್ ಪೂಜೆ ಬುಧವಾರದಂದು ನೆರವೇರಿದ್ದು, ಮುಂದಿನ ತಿಂಗಳ 12ರಂದು ಮುಹೂರ್ತ ನೆರವೇರಲಿದೆ.
ಅದ್ದೂರಿ ಚಿತ್ರ ತೆರೆಕಂಡ 9 ವರ್ಷದ ಬಳಿಕ ಧ್ರುವ ಸರ್ಜಾ ಹಾಗೂ ಎ.ಪಿ. ಅರ್ಜುನ್ ಮತ್ತೆ ಜೊತೆಯಾಗುತ್ತಿದ್ದು, ವಾಸವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಉದಯ್ ಕೆ ಮೆಹ್ತಾ ಬಂಡವಾಳ ಹೂಡಲಿದ್ದಾರೆ. ಅದ್ದೂರಿ ಚಿತ್ರ 2012ರಲ್ಲಿ ತೆರೆಕಂಡು ಧ್ರುವ ಹಾಗೂ ಅರ್ಜುನ್ ಇಬ್ಬರಿಗೂ ಯಶಸ್ಸು ಸಿಕ್ಕಿತ್ತು.
‘ಪೊಗರು’ ಬಳಿಕ ಧ್ರುವ ಸರ್ಜಾ ‘ದುಬಾರಿ’ ಚಿತ್ರದ ಬಗ್ಗೆ ನಿರೀಕ್ಷೆಯಿತ್ತು. ಆದರೆ ಚಿತ್ರ ಟೇಕ್ ಆಫ್ ಆಗೋದಿಲ್ಲ ಅನ್ನೋದು ಖಚಿತವಾಗಿದ್ದರಿಂದ ಬೇರಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಉದಯ್ ಮೆಹ್ತಾ ನಿರ್ಮಾಣದಲ್ಲಿಯೇ ಹೊಸ ಚಿತ್ರ ಆಗಸ್ಟ್ 12ರಂದು ಮುಹೂರ್ತ ನೆರವೇರಿಸಿಕೊಳ್ಳಲಿದ್ದು, ಚಿತ್ರೀಕರಣ ಆರಂಭವಾಗಲಿದೆ. ಇದು ಧ್ರುವ ಸರ್ಜಾ ಅಭಿಮಾನಿಗಳಿಗೆ ನಿಜಕ್ಕೂ ಗುಡ್ ನ್ಯೂಸ್ ಎನ್ನಬಹುದು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795