ವಿಜಯ ಸಂಘರ್ಷ
ಕುಡಿಯುವ ನೀರಿನ ಟ್ಯಾಂಕ್ ಶಿಥಿಲ ಗೊಂಡಿದ್ದು ಯಾವ ಸಂದರ್ಭದಲ್ಲಾದರೂ ನೆಲಕ್ಕೆ ಉರುಳುವ ಸ್ಥಿತಿಯಲ್ಲಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.*
ಕೆ ಆರ್ ಪೇಟೆ ತಾಲೂಕು ಸಂತೇಬಾಚ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕ್ಯಾತನಹಳ್ಳಿ ಗ್ರಾಮದ ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿದೆ.
ಸಾರ್ವಜನಿಕರಿಗಾಗಿ ನಿರ್ಮಿಸಲಾಗಿ ರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಟ್ಯಾಂಕ್‌ನ ಒಳ ಹಾಗೂ ಹೊರ ಭಾಗಗಳಲ್ಲಿ ಗಾರೆ ಉದುರುತ್ತಿದ್ದು, ಕಬ್ಬಿಣದ ರಾಡುಗಳು ತುಕ್ಕು ಹಿಡಿದಿವೆ. ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ವಾಸ ಮಾಡುವ ಕುಟುಂಬದವರು ಯಾವ ಘಳಿಗೆಯಲ್ಲಿ ನೀರಿನ ಟ್ಯಾಂಕ್ ಕುಸಿದು ಬಿದ್ದು ಮನೆಗೆ ಅನಾಹುತ ಆಗುವುದೊ ಎಂಬ ಭಯದ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಟ್ಯಾಂಕ್ ನೀರು ಕಲುಷಿತ:
ಹಿಂದೆ ಒಂದು ಬಾರಿ ಗ್ರಾಮ ಪಂಚಾಯಿತಿ ನೌಕರರೊಬ್ಬರು ನೀರಿನ ಟ್ಯಾಂಕ್ ಒಳಗೆ ಸ್ವಚ್ಛತೆಗಾಗಿ ಏಣಿ ಮೇಲೇರುವಾಗ ತುಕ್ಕು ಹಿಡಿದಿದ್ದ ಏಣಿ ಮುರಿದುಬಿದ್ದು ಟ್ಯಾಂಕ್ ಒಳಗಡೆ ಬಿದ್ದು ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಗುವ ಅನಾಹುತ ತಪ್ಪಿತ್ತು. ಮುರಿದು ಬಿದ್ದಿರುವ ಏಣಿ ಇನ್ನೂ ದುರಸ್ಥಿ ಆಗಿಲ್ಲ ಇದೇ ಕಾರಣಕ್ಕೆ ಅವರು ಹೆದರಿ ಸ್ವಚ್ಛತೆಯ ಕಾರ್ಯಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಸುಮಾರು 30 ವರ್ಷದ ಹಿಂದೆ ನೀರಿನ ಟ್ಯಾಂಕ್ ನಿರ್ಮಾಣ ವಾಗಿದ್ದು, ಈಗ ಶಿಥಿಲಗೊಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರನ್ನ ಕೊಟ್ಟಿದ್ದರೂ ನಿರ್ಲಕ್ಷಿಸಿ ದ್ದಾರೆ. ಇಲ್ಲಿ ಅಕ್ಕ ಪಕ್ಕದ ಮನೆಯವರು ಭಯದಿಂದ ಜೀವನ ನಡೆಸುವ ಪರಿಸ್ಥಿತಿ ಉದ್ಭವವಾಗಿದೆ.
*ಮಲ್ಲೇಶ್ ದೊಡ್ಡಕ್ಯಾತನಹಳ್ಳಿ ಗ್ರಾಮಸ್ಥರು.*
ನಾನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶಿಥಿಲಗೊಂಡಿರುವ ನೀರಿನ ಟ್ಯಾಂಕನ್ನು ತೆರವು ಗೊಳಿಸಿ ಪರ್ಯಾಯವಾಗಿ ಹೊಸದೊಂದು ನೀರಿನ ಟ್ಯಾಂಕ್ ಅನ್ನು ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ಮತ್ತೊಂದು ಬಾರಿ ಮಾಡಲಿದ್ದೇನೆ.
ಎಂ.ಬಿ ನೂತನ್. ಗ್ರಾಪಂ ಪಿಡಿಒ
ವರದಿ : ಸಿ.ಆರ್ ಜಗದೀಶ್ ಕೆ.ಆರ್. ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795