ವಿಜಯ ಸಂಘರ್ಷ
ನಾಗಮಂಗಲ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮೇಲಿನ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಂಘದ ಅಧ್ಯಕ್ಷ ತಿಮ್ಮಪ್ಪ ತಿಳಿಸಿದರು.
ಅವರಿಂದು ಸಹಕಾರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಉದ್ದೇಶಿಸಿ ಮಾತನಾಡಿ, ನಮ್ಮ ಸಂಘದ ವಿರುದ್ಧ ಕೆಲವರು ನ್ಯಾಯಬೆಲೆ ಅಂಗಡಿ ಗಳಿಗೆ ತೂಕದಲ್ಲಿ ವಂಚನೆ ಮಾಡುತ್ತಿದ್ದಾರೆ. ಆಹಾರ ಪಡಿತರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಮಾತನಾಡಿದ್ದು ಇದು ಯಾವ ರೀತಿಯಲ್ಲಿ ಎಂಬುದನ್ನು ತಿಳಿಯದೆ ದೂರಿರುವುದು ಸರಿ ಇಲ್ಲ. ಈ ಸಂಘವು ಉನ್ನತ ಮಟ್ಟದಲ್ಲಿ ಪ್ರಗತಿಯ ದಾಪುಗಾಲು ಆಗುತ್ತದೆ ಎಂದರು.
ಸಂಘವು ಸಾವಿರ 1949 ರಲ್ಲಿ ಆರಂಭಗೊಂಡು ಅಂದಿನಿಂದ ಇಂದಿನವರೆಗೂ ಯಾವುದೇ ಲೋಪವಿಲ್ಲದೆ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದ್ದು ಕೆಲವರು ಸಂಘದ ಬಗ್ಗೆ ವಿತರಣೆಯನ್ನು ಬೇರೊಂದು ಸಂಸ್ಥೆಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಒತ್ತಾಯಿಸಿರುವುದು ಅವರ ಅನುಕೂಲಕ್ಕಾಗಿ ಹೊರತು ಬೇರೆ ಯಾವುದೇ ದೃಷ್ಟಿಯಿಂದ ಇಲ್ಲ ಇದುವರೆಗೂ ನ್ಯಾಯಬೆಲೆ ಅಂಗಡಿಗಳಿಂದ ಯಾವುದೇ ದೂರು ಇರುವುದಿಲ್ಲ. ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳು ಅಮಾನತುಗೊಂಡ ತಾತ್ಕಾಲಿಕವಾಗಿ ನಿರ್ವಹಣೆ ಮಾಡಲು ಆಹಾರ ಇಲಾಖೆಯಿಂದ ವಿತರಣೆ ಮಾಡಲು ಅವಕಾಶ ಕೊಟ್ಟಿರುತ್ತಾರೆ ಈ ರೀತಿ ಸಂಘವು ಮುನ್ನಡೆಯುತ್ತಿದ್ದು ಇದರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದೆಂದುಸಹಕಾರಿ ಮಹಾಮಂಡಳದ ನಿರ್ದೇಶಕರಾದ ರಾಜೇಗೌಡರುಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ದಿನೇಶ್. ಕೃಷ್ಣೇಗೌಡ ಹಾಲತಿ ಗಿರೀಶ್. ಗೋವಿಂದ ರಾಚಯ್ಯ .ಚೇತನ್, ಚಿಕ್ಕಣ್ಣ ಉಪಸ್ಥಿತರಿದ್ದರು.
ವರದಿ : ದೇವಲಾಪುರ ಜಗದೀಶ್ ನಾಗಮಂಗಲ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795