ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಡದಕಟ್ಟೆಯ ನವಚೇತನ ಕನ್ನಡ ಶಾಲೆಯ ಆವರಣದಲ್ಲಿ 5 ನೇ ತರಗತಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ತರಗತಿ ಏರ್ಪಡಿಸಲಾಗಿತ್ತು.
ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ನೇತೃತ್ವ ದಲ್ಲಿ ನಡೆದ ಸ್ಪರ್ಧೆಯಲ್ಲಿ ಬಾಲಕ, ಬಾಲಕಿಯರು ವಿವಿಧ ಶೈಲಿಯ ಬಣ್ಣದ ರಂಗೋಲಿ ಬಿಡಿಸಿ ಶಾಲಾ ಆಡಳಿತ ಮಂಡಳಿಯವರ,ಶಿಕ್ಷಕರ, ಶಾಲಾ ಮಕ್ಕಳ ಮನ ಸೆಳೆದರು.
ತೀರ್ಪುಗಾರರಾಗಿ ಶಾಲಾ ಶಿಕ್ಷಕಿಯರಾದ ಕಾವ್ಯ ಮತ್ತು ಶಿಲ್ಪಾ ರವರು ರಂಗೋಲಿ ಬಿಡಿಸಿದ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಫಲಿತಾಂಶ ಪ್ರಕಟಿಸಿದರು.
ತರಗತಿ ಶಿಕ್ಷಕರು ಪ್ರತಿ ಶನಿವಾರ ಸಿಸಿಎ ಅಡಿಯಲ್ಲಿ ವಿವಿಧ ರೀತಿಯ ಸ್ಪರ್ಧೆ ಏರ್ಪಡಿಸಿ,ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಹೆಚ್ಚಿಸುತ್ತಿದ್ದಾರೆ.