ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕವಾಗಿ ಅನುಕೂಲ ವಾಗಲು ಕಾರ್ಮಿಕ ಸಚಿವರ ಜೊತೆ ಮಾತನಾಡಿ ವಿಶೇಷವಾಗಿ ವೃತ್ತಿಪರ ಕಿಟ್ ಗಳು ಹಾಗೂ ವಿವಿಧ ಸೌಲಭ್ಯಗಳನ್ನು ಕೊಡಿಸಲಾಗಿದೆ. ಕಾರ್ಮಿಕರು ತಮ್ಮ ನೊಂದಾಯಿತ ಕಾರ್ಮಿಕರ ಗುರುತಿನ ಚೀಟಿಯನ್ನು ಸಮಯಕ್ಕೆ ನವೀಕರಣ ಗೊಳಿಸಿ ವಿವಿಧ ಸೌಲಭ್ಯಗಳನ್ನು ಪಡೆದು ಕೊಳ್ಳಲು ಶಾಸಕ ಬಿ.ಕೆ. ಸಂಗಮೇಶ್ವರ ಕರೆ ನೀಡಿದರು.
ಅವರು ನಗರದಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಬಿಸಲ್ ತರಬೇತಿದಾರರ ಕಂಪನಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಸಂಯುಕ್ತಾಶ್ರ ಯದಲ್ಲಿ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಷೀನ್ ಹಾಗೂ ಮಷಿನ್ ಹೆಲ್ಪರ್ ಗಳಿಗೆ ತರಬೇತಿ ಶಿಬಿರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವ ಕಲಿಕೆಯ ಮಾನ್ಯತೆ ಮತ್ತು ಸೇತುಬಂಧ ತರಬೇತಿ ಶಿಬಿರವನ್ನು ಹತ್ತು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವಿನೋದ್ “ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಈಗಾಗಲೇ ನೋಂದಾ ಯಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳು ವೃತ್ತಿಪರ ವೃತ್ತಿಗೆ ಅನುಗುಣವಾಗಿ ಕಾರ್ಮಿಕರ ಪರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಮ್ಮ ಒಕ್ಕೂಟದ ಹೋರಾಟಗಳಿಗೆ ಸ್ಪಂದಿಸಿ ಅಪಘಾತ ಪರಿಹಾರ ಮೊತ್ತವನ್ನು 5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿ ಹಾಗೂ ಅನುಗ್ರಹ ರಾಶಿ ಅಂತ್ಯಕ್ರಿಯೆ ವೆಚ್ಚವನ್ನು 75ಸಾವಿರ ರೂ ಗಳಿಂದ ಒಂದು ಲಕ್ಷ ಐವತ್ತು ಸಾವಿರವರೆಗೆ ಕರ್ನಾಟಕ ಸರ್ಕಾರ ಏರಿಕೆ ಮಾಡಿದೆ” ಎಂದು ಅಭಿನಂದನೆ ಸಲ್ಲಿಸಿದರು.
ಕಾರ್ಮಿಕ ಇಲಾಖೆಯ ನಿರೀಕ್ಷಕ ರಕ್ಷಿತ್ ತರಬೇತಿಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಸುರೇಶ, ನಿರ್ದೇಶಕ ಭಾಷಾ, ನೇತ್ರಾವತಿ ಪ್ರಮುಖರಾದ ಕೆ. ಮುರುಗನ್, ಶಬರೀಶ್, ಕುಮಾರಿ ಸುಪ್ರೀತಾ, ಬಿಸಲ್ ತರಬೇತಿ ದಾರ ಸಮರ್ಥ್ ಸೇರಿ ಹಲವು ಕಾರ್ಮಿಕರು ಉಪಸ್ಥಿತರಿದ್ದರು.