ಭದ್ರಾವತಿ-ನ್ಯಾಯಾಲಯದಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಯೋಗಾಭ್ಯಾಸವನ್ನು ಪ್ರತಿನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಬದುಕಿನಲ್ಲಿ ಅಳವಡಿಸಿ ಕೊಂಡರೆ ಎಲ್ಲ ರೋಗಗಳಿಂದ ಮುಕ್ತರಾಗಿ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯ ಎಂದು ಯೋಗ ಗುರು ಡಾ.ನಾಗರಾಜ್ ಹೇಳಿದರು.
     
     ಅವರು ಭಾನುವಾರ ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ 12ನೇ ಅಂತರ ರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ನ್ಯಾಯಾಧೀಶರಿಗೆ,ವಕೀಲರಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ ಯೋಗಾಭ್ಯಾಸವನ್ನು ಹೇಳಿಕೊಟ್ಟ ನಂತರ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

      ಇಂದು ನಾವು ತಿನ್ನುವ ಹಣ್ಣು, ಆಹಾರ ಎಲ್ಲವೂ ರಾಸಾಯನಿಕಗಳ ಸಿಂಪಡಣೆ ಯಿಂದ ಕಲಬೆರಕೆ ಯಾಗಿದ್ದು ಅನಾರೋಗ್ಯಕ್ಕೆ ದಾರಿ ಮಾಡಿ ಕೊಟ್ಟಿವೆ. ನಾವು ಎಚ್ಚರಿಕೆ ಯಿಂಧ ಜೀವನಶೈಲಿಯನ್ನು ರೂಪಿಸಿ ಕೊಳ್ಳುವ ಮೂಲಕತೋಗಮುಕ್ತ ಆರೋಗ್ಯ ವಂತ ಜೀವನ ನಡೆಸಬೇಕು. ಯೋಗ,ಧ್ಯಾನ ಎಲ್ಲವೂ ಭಾರತದ ಪುರಾತನ ವಿದ್ಯೆ ಯಾಗಿದ್ದು ಕಳೆದ ಹನ್ನೆರಡು ವರ್ಷಗಳಿಂದ ಇದಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದೆ.

     ಇಂದು ಇಡಿವಿಶ್ವದಾದ್ಯಂತ ಯೋಗಾಭ್ಯಾಸ ನಡೆಯುತ್ತಿದೆ ಯೋಗಾ ಭ್ಯಾಸವನ್ನು ಒಂದುದಿನ ಮಾಡಿ ಬಿಟ್ಟರೆ ಅದರ ಪ್ರಯೋಜನ ಸಿಗುವುದಿಲ್ಲ ಯೋಗಾ ಭ್ಯಾಸವನ್ನು ಪ್ರತಿನಿತ್ಯ ಜೀವನದ ಕೊನೆಯ ತನಕ ಮಾಡುವ ಸಂಕಲ್ಪಮಾಡಿಕೊಂಡು ಅದನ್ನು ಕಾರ್ಯಗತ ಮಾಡಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಧ್ಭುತವಾದ ಪ್ರಯೋಜನ ಸಿಗುವುದು ಖಚಿತ ಎಂಧರು.
   
   ನಗರದ ನಾಲ್ಕನೆ ಹೆಚ್ಚುವರಿ ಜಿಲ್ಲಾಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುನಿರಾಜ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಹನುಮಂತ,ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್,ಒಂದನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಸೀರಾಭಾನು, ಎರಡನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚೇತನ,ನಾಲ್ಕನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಿರಿಜಾ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರಸಂಘದ ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ಶಿವಕುಮಾರ್, ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕ ವಾಗಿ ಸೂರ್ಯನಮಸ್ಕಾರ ಮತ್ತು ವಿವಿಧ ಆಸನಗಳನ್ನು ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು