ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾನವ ಹಕ್ಕು ಗಳ ಹೋರಾಟ ಸಮಿತಿ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ವಿಐಎಸ್‍ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ತಾಲೂಕು ಕಚೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

   ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ದೇಶದ ಪ್ರಸಿದ್ಧ ಕಾರ್ಖಾನೆಗಳಾದ ವಿಐಎಸ್ ಎಲ್ ಹಾಗೂ ಎಂಪಿಎಂ ಅವಳಿ ಕಾರ್ಖಾನೆ ಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಾಗಲಿ ಅಭಿವೃದ್ಧಿಗೊಳಿ ಸದೆ, ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.

    ಅವಳಿ ಕಾರ್ಖಾನೆಗಳನ್ನು ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ರವರ ಪರಿಶ್ರಮದಿಂದ ಕ್ಷೇತ್ರದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿ ಮುನ್ನುಡಿ ಬರೆದಿದ್ದರು.ಆದರೆ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರ ಗಳು ಕಾರ್ಖಾನೆ ಅಭಿವೃದ್ಧಿ ಗೊಳಿಸದೆ ನಿರ್ಲಕ್ಷವಹಿಸಿ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವುದು ವಿಷಾಧನೀಯ ಎಂದರು.

    ತಕ್ಷಣ ಕಾರ್ಖಾನೆಗಳನ್ನು ಅಭಿವೃದ್ಧಿ ಪಡಿಸಿ ಇಲ್ಲವೇ ಕಾರ್ಖಾನೆಗಳ ನೀಡಿದ ಸಹಸ್ರಾರು ಎಕರೆ ಜಮೀನು ಮತ್ತು ಮನೆಗಳನ್ನು ಹಾಗೂ ಎಂಪಿಎಂ ಕಾರ್ಖಾನೆಗೆ ನೀಡಿರುವ 72 ಎಕರೆ ಜಮೀನು ಮತ್ತು ಮನೆಗಳನ್ನು ನಿವೃತ್ತಿ ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಮತ್ತು ಬಡ ಕುಟುಂಬ ಸ್ಥರಿಗೆ ಎರಡು ಎಕರೆ ಜಮೀನು ಹಾಗೂ ತಲಾ ಒಂದು ಮನೆಯನ್ನು ನೀಡ ಬೇಕೆಂದು ಅಗ್ರಹಿಸಿದರು.

     ನೂತನವಾಗಿ ನಿರ್ಮಾಣಗೊಳ್ಳು ತ್ತಿರುವ G+3 ಆಶ್ರಯ ಮನೆಗಳಿಗೆ ಕಾಮ್ರೆಡ್ ಡಿ.ಸಿ. ಮಾಯಣ್ಣ ರವರ ಹೆಸರು ನಾಮಕರಣ ಮಾಡುವುದು, ಕ್ಷೇತ್ರದಲ್ಲಿ 13 ಸಾವಿರಕ್ಕೂ ಹೆಚ್ಚು ವಿವಿಧ ಯೋಜನೆಯ ಪಿಂಚಣಿ ವಿನಾಕಾರಣ ಸ್ಥಗಿತಗೊಳಿಸಿದ್ದು, ಮರು ಮಂಜೂರು ಮಾಡುವುದು, ನವಲೆ ಬಸಾಪುರ ಗ್ರಾಮದ ಗ್ರಾಮ ಠಾಣಾ 999ರಲ್ಲಿ ಆಯ್ಕೆಯಾದ ಫಲಾನುಭವಿ ಗಳಿಗೆ ತಕ್ಷಣ ಹಕ್ಕುಪತ್ರವನ್ನು ನೀಡುವುದು, ಅರಕೆರೆ ದಾನವಾಡಿ ಗ್ರಾಮದ ಸರ್ವೆ ನಂಬರ್ 29ರಲ್ಲಿ ಹುಲ್ಲು ಬನ್ನಿ ಜಾಗದಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರ ಮೇಲೆ ಸುಳ್ಳು ಕೇಸು ದಾಖಲಿಸಿದ ಕ್ರಮ ಖಂಡಿಸಿದರು.

     ಕನಕ ಮಂಟಪ ಮೈದಾನದಲ್ಲಿ 8 ಲಕ್ಷ ವೆಚ್ಚದಲ್ಲಿ ಶೌಚಾಲಯವನ್ನು ನಿರ್ಮಿಸಿ, ದುರಸ್ತಿಗೊಂಡು ವರ್ಷಗಳೇ ಕಳೆಯುತ್ತಿದ್ದರು ಅದನ್ನು ಸರಿಪಡಿಸಿದೆ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿ ಗಳು ನಿರ್ಲಕ್ಷವಹಿಸುತ್ತಿದ್ದಾರೆಂದು ಕಿಡಿಕಾರಿದರು.

      ನಗರದ ಡಾ:ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ದಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿ ತಲುಪಿ ತಹಸೀಲ್ದಾರ್ ಮೂಲಕ ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ನಗರಸಭೆಗೆ ಮನವಿ ಸಲ್ಲಿಸಿದರು.

    ಪದಾಧಿಕಾರಿಗಳಾದ ಬ್ರಹ್ಮ ಲಿಂಗಯ್ಯ, ಆರ್.ಬಸವರಾಜಪ್ಪ, ಎಂ.ವಿ.ಚಂದ್ರ ಶೇಖರ್, ಶ್ರೀನಿವಾಸ್, ನಾರಾಯಣ ಗೌಡ, ಏಕಾಂತ್, ಶೇಖರ್, ಟಿ.ಜಿ. ಬಸವರಾಜಯ್ಯ ಸೇರಿದಂತೆ ನೂರಾರು ನೊಂದ ಕುಟುಂಬಸ್ಥರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

     ಇದೇ ಸಂದರ್ಭದಲ್ಲಿ ಕಾಮ್ರೆಡ್ ಡಿ.ಸಿ.ಮಾಯಣ್ಣ ರವರ ಜನ್ಮದಿನಾ ಚರಣೆ ಯನ್ನು ಆಚರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು