ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇ ನಗರದ ಬಿ.ಇ.ಒ ಕಛೇರಿ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಭವನದ ಮಧ್ಯಭಾಗ ದಲ್ಲಿ ಇರುವ ಪ್ರಾಥಮಿಕ ಶಾಲೆಯ ಆವರಣದ ಖಾಲಿ ಜಾಗವನ್ನು ಶಾಲಾ ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ, ದಲಿತ, ಕ್ರಿಶ್ಚಿಯನ್, ಮುಸ್ಲಿಂ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ದೇಶದ ಎಲ್ಲಾ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನ ತಿಳಿಸಿದ್ದರು ಸಹ ಸರ್ಕಾರಿ ಶಾಲೆ, ಕಾಲೇಜುಗಳು ಕಸದ ಗುಂಡಿ ಯಂತೆ, ನಿರ್ಲಕ್ಷ್ಯತನದಿಂದ ಬಡ ಜನರು ವಿಧ್ಯಾಭ್ಯಾಸ ಮಾಡುತ್ತಿದ್ದು, ಸಮಾನ ಶಿಕ್ಷಣ ಎಂಬ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು.
ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಸರ್ಕಾರಿ ಶಾಲೆಗಳು ಅದಪತನದತ್ತ ಸಾಗುತ್ತಿರುವುದು ಶೋಚನೀಯ ವಾಗಿದೆ. ಸರ್ಕಾರಿ ಶಾಲೆಗಳು ಕಸದ ಗುಂಡಿಯಾಗಿ ಪರಿವರ್ತನೆ ಗೊಂಡಿದೆ. ಶಿಕ್ಷಕರಿಲ್ಲದೆ. ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕಟ್ಟಡದ ವ್ಯವಸ್ಥೆ ಇಲ್ಲದೆ ಹದಗೆಟ್ಟಿದ್ದು, ಸರ್ಕಾರಿ ಶಾಲೆಗೆ ಸೇರಿದ ಜಾಗಗಳನ್ನು ಕಬಳಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ಕನ್ನ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದ ನಗರದ ಹೃದಯ ಭಾಗದಲ್ಲಿ ಇರುವ ಪ್ರಾಥಮಿಕ ಪಾಠಶಾಲೆಯ ಆವರಣದ ಜಾಗವನ್ನು ಕಬಳಿಸಲು ಖಾಸಗಿ ವ್ಯಕ್ತಿಗಳು ಸಂಚು ನಡೆಸುತ್ತಿದ್ದು ಆ ಜಾಗದಲ್ಲಿ ಕಳೆದ 20 ವರ್ಷ ಗಳಿಂದಲೂ ಕಸದ ಗುಂಡಿ ಯಂತಿತ್ತು. ಈ ಬಗ್ಗೆ ಎಚ್ಚರಿಸಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚಗೊಳಿ ಸದೆ ಕನಿಷ್ಟ ಶಾಲೆಯ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿ , ಮಕ್ಕಳ ಆಟಿಕೆಗಳನ್ನು ಅಳವಡಿಸಿದ್ದಲ್ಲಿ ಸರ್ಕಾರಿ ಶಾಲೆಗೆ ಬರುವ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಈ ಹಿನ್ನಲೆಯಲ್ಲಿ ಒಂದು ವಾರದಲ್ಲಿ ಖಾಲಿ ಜಾಗಕ್ಕೆ ಬೇಲಿ ನಿರ್ಮಿಸಿ ಆಟಿಕೆ ಅಳವಡಿಸಲು ಒತ್ತಾಯಿಸಲಾಯಿತು.
ನಂತರ ಬಿ ಇ ಓ ಹಾಗೂ ನಗರಸಭೆ ಆಯುಕ್ತರುಗಳ ಮೂಲಕ ಮುಖ್ಯಮಂತ್ರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು,ತಹಶೀಲ್ದಾರ್ ರವರುಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಪ್ರತಿಭಟನೆ ನೇತೃತ್ವವಹಿಸಿದ್ದರು.ಡಿಸಿಎಂ ರಾಜ್ಯಾಧ್ಯಕ್ಷ ಪ್ರಮೋದ್ ಕುಮಾರ್, ಯುನೈಟೆಡ್ ಕ್ರಿಶ್ಚಿಯನ್ಅಸೋಸಿ ಯೇಷನ್ ಅಧ್ಯಕ್ಷ ಸೆಲ್ವರಾಜ್, ಪ್ರಮುಖರಾದ ತೀರ್ಥೇಶ್, ಬ್ರಹ್ಮಲಿಂಗಯ್ಯ ,ಸೋಮಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.