ಭದ್ರಾವತಿ-"ಕೈ"ಸದಸ್ಯರ ಬೆಂಬಲ: ಜೆಡಿಎಸ್ ಸದಸ್ಯೆ ಸ್ಥಾಯಿ ಸಮಿತಿ ಅಧ್ಯಕ್ಷೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ 23 ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ನಗರಸಭೆ ಉಳಿದ ಅವಧಿಗೆ ಮಂಗಳವಾರ ಅಧಿಕಾರ ಸ್ವೀಕರಿಸಿದರು. 

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆ ಯಾಗಿರುವ ಕೆ.ಪಿ ಪ್ರೇಮಾ ಮೊದಲ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. 

35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ 19 ಕಾಂಗ್ರೆಸ್, 11 ಜೆಡಿಎಸ್, 4 ಬಿಜೆಪಿ ಮತ್ತು 1 ಪಕ್ಷೇತರ ಸದಸ್ಯರಿದ್ದಾರೆ. ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದಿದ್ದು, ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಶಾಸಕ ಬಿ.ಕೆ ಸಂಗಮೇಶ್ವರ್ ತೀರ್ಮಾನದಂತೆ ಪ್ರೇಮಾ ಅವರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಹಾಗೂ ಉಪಾಧ್ಯಕ್ಷ ಬಷೀರ್ ಅಹಮದ್, ಸದಸ್ಯರಾದ ಬಿ.ಕೆ.ಮೋಹನ್, ವಿ. ಕದಿರೇಶ್, ಚನ್ನಪ್ಪ, ಕಾಂತರಾಜ್, ಕೋಟೇಶ್ವ ರಾವ್, ಅನುಸುಧಾ ಮೋಹನ್ ಪಳನಿ, ಸರ್ವಮಂಗಳ ಭೈರಪ್ಪ, ಶೃತಿ ಸಿ. ವಸಂತಕುಮಾರ್ ಕೆ.ಜಿ, ಶಶಿಕಲಾ ನಾರಾಯಣಪ್ಪ, ಮಹಮದ್ ಯೂಸುಫ್, ಬಸವರಾಜ ಬಿ. ಆನೇಕೊಪ್ಪ, ಪೌರಾಯುಕ್ತ ಎನ್.ಕೆ ಹೇಮಂತ್ ಸೇರಿದಂತೆ ಇನ್ನಿತರರು ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಅವರನ್ನು ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು