ಆರ್ ಟಿಐ ಕಾರ್ಯಕರ್ತರ ಮೇಲೆ ಗ್ರಾ.ಪo ಸದಸ್ಯ ನಿಂದ ಹಲ್ಲೆ..!

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ : ತಾಲ್ಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಸದಸ್ಯ ನೋರ್ವ ಆರ್ ಟಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸದಸ್ಯ ಪ್ರವೀಣ ಹಲವಾರು ಅಕ್ರಮ ಗಳಲ್ಲಿ ಭಾಗಿಯಾಗಿರುವ ಆರೋಪ ಗಳಿದ್ದು, ಸರ್ಕಾರಿ ಗ್ರಾಮಠಾಣ ಜಾಗ ಕಬಳಿಸಿರುವ ಆರೋಪವು ಸಹ ಇದೆ ಎಂದು ನೊಂದ ಆರ್ ಟಿ ಐ ಕಾರ್ಯಕರ್ತರು ದೂರಿದ್ದಾರೆ.

ಇತ್ತೀಚೆಗೆ ಸಿಂಗನ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ LKG ಶಾಲೆ ಶುರುವಾಗಿದ್ದು, ಶಾಲೆಯಲ್ಲಿ ಅತಿಥಿ ಶಿಕ್ಷಕಿ ನೇಮಕಾತಿ ಯಲ್ಲಿ ಅಕ್ರಮ ನಡೆದಿದ್ದು, ಕೆಲವು ಶಿಕ್ಷಕಿ ಆಕಾಂಕ್ಷಿ ಹಾಗೂ ಸಾಮಾಜಿಕ ಹೋರಾಟಗಾರರು RTI ಕಾಯಿದೆ ಅಡಿಯಲ್ಲಿ ಅರ್ಜಿ ಹಾಕಿ ಮಾಹಿತಿ ಕೇಳಿದ್ದು ಪ್ರವೀಣನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಹಿನ್ನಲೆ ಯಲ್ಲಿ RTI ಕಾರ್ಯಕರ್ತ ಆನಂದ್ ಎನ್ನುವವರಿಗೆ ಬಿ ಆರ್ ಪಿ ಸ್ಯಾಂಡಲ್ ರಸ್ತೆ ಭದ್ರಾ ಜಲಾಶಯದ ಮುಖ್ಯ ಗೇಟ್ ಮುಂಭಾಗ ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿ, ನಿಮ್ಮನ್ನು ಉಳಿಸು ವುದಿಲ್ಲ ಎಂದು ಜೀವ ಬೆದರಿಗೆ ಹಾಕ ಲಾಗಿದೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಬುಧವಾರ ಕನ್ನಡ ಪರ ಹೋರಾಟ ಗಾರ ಈಶ್ವರ್ ರವರ ಮೇಲೆ ಶಂಕರಘಟ್ಟ ಹಾರ್ಡ್ ವೇರ್ ಮುಂಭಾಗ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು