ವಿಜಯ ಸಂಘರ್ಷ
ತೀರ್ಥಹಳ್ಳಿ: ಪಟ್ಟಣಕ್ಕೆ ಕೂಗಳತೆಯ ದೂರದಲ್ಲಿರುವ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಲಿನ ಕುರುವಳ್ಳಿ ಹಾಗೂ ಅಕ್ಕಪಕ್ಕ ಗ್ರಾಮದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಂತೆ ಕಿರಣ್ ಕುಮಾರ್ ಹಾಗೂ ದರ್ಶನ್ ರವರು ಇಂದು ಗ್ರಾಪಂ ಎದುರು ಧರಣಿ ಕುಳಿತಿದ್ದಾರೆ.
ಅಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆ. ತಿಂಗಳಿಗೆ 60 ರೂಪಾಯಿ ವಸೂಲಿ ಮಾಡುತ್ತಾರೆ ಆದರೆ ನೀರು ಶುದ್ಧೀಕರಣ ಘಟಕ ಕೆಟ್ಟು ನಿಂತಿದೆ. ಹಾಗೆ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಡೀ ಪಟ್ಟಣದ ಕಸ ವಿಲೇವಾರಿ ಮಾಡಲು ಕಸ ವಿಲೇವಾರಿ ಘಟಕ ಇದೆ.
ಪಟ್ಟಣ ಪೂರ್ಣ ಪ್ರಮಾಣದಲ್ಲಿ ಸ್ವಚ್ಛ ಮಾಡುವುದಕ್ಕೆ ಕಸ ವಿಲೇವಾರಿ ಮಾಡಲು ಮೇಲಿನ ಕುರುವಳ್ಳಿ ಬೇಕು ಆದರೆ ಮೇಲಿನ ಕುರುವಳ್ಳಿ ಗ್ರಾಮದ ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಪಟ್ಟಣ ಪಂಚಾಯತಿಯವರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ಯವರೊಂದಿಗೆ ವಾರಕ್ಕೊಂದು ಬಾರಿ ಕಸ ತೆಗೆದುಕೊಂಡು ಹೋಗುವ ಗಾಡಿ ಕಳುಹಿಸಿ ಸ್ವಚ್ಛ ಮಾಡಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪಿಡಿಒ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹೇಳುತ್ತಾರೆ. ಆದರೆ ಒಪ್ಪಂದ ಮಾಡಿಕೊಂಡ ಸ್ವಲ್ಪ ಸಮಯ ಸ್ವಚ್ಛತೆಯನ್ನು ಮಾಡಿದ್ದಾರೆ. ನಂತರ ಇಲ್ಲಿಯವರೆಗೆ ಯಾವುದೇ ರೀತಿಯಾಗಿ ಸಮರ್ಪಕವಾಗಿ ಸ್ವಚ್ಛತೆಯನ್ನು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
✍🏻: ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795