ವಿಜಯ ಸಂಘರ್ಷ
ಭದ್ರಾವತಿ: ಜಲಾಶಯದ ಕ್ರಸ್ಟ್ ಗೇಟ್ ಬಳಿ ಕೈಗೊಳ್ಳಲಾಗಿರುವ ಕಾಮಗಾರಿ ಗುಣಮಟ್ಟ ಕುರಿತಾದ ಆರೋಪಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಭದ್ರಾ ಮೇಲ್ದಂಡೆ ಯೋಜನೆಯ ಕ್ರಸ್ಟ್ ಗ್ರೇಟ್ ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು 2016-18 ನೇ ಸಾಲಿನಲ್ಲಿ 6.50 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. 2018ರಲ್ಲಿ ಡ್ಯಾಮ್‍ನಿಂದ ನೀರು ಹೊರಬಿಟ್ಟಾಗ ಕಾಮಗಾರಿ ಮತ್ತೆ ದುರಸ್ತಿ ಹಂತ ತಲುಪಿತು.
ಸ್ಥಳೀಯರು ಮತ್ತು ರೈತ ಸಂಘಟನೆ ಗಳು 2016ರ ಕಾಮಗಾರಿ ಕಳಪೆಯ ದಾಗಿದ್ದು, ಇದರಲ್ಲಿ ಭಾಗಿಯಾಗಿದ್ದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಮೂವರು ನಿವೃತ್ತ ಇಂಜಿನಿಯರುಗಳ ಸಮಿತಿ ರಚಿಸಲಾಗಿದ್ದು, ಅವರು ಪರಿಶೀಲಿಸಿ ಕಾಮಗಾರಿ ಕಳಪೆಯ ದಾಗಿತ್ತೋ ಅಥವಾ ಇದೊಂದು ನೈಸರ್ಗಿಕ ಅವಘಡವೋ ಎಂದು ವರದಿ ನೀಡಲಿದ್ದಾರೆ. ಆ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಮತ್ತಿತರೆ ಸಂಘಟನೆಗಳ ಮುಖಂಡರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795