ರಸ್ತೆ ಬದಿಯಲ್ಲಿ ನೂರಕ್ಕೂ ಹೆಚ್ಚು ಸತ್ತ‌ಕೋಳಿಗಳು: ಅಧಿಕಾರಿಗಳ ದಿಡೀರ್ ಭೇಟಿ !

 


ವಿಜಯ ಸಂಘರ್ಷ

ತೀರ್ಥಹಳ್ಳಿ: ತಾಲೂಕಿನ ತ್ರಿಯಂಬಕ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಲತ್ತಿ - ದೆಮ್ಲಾಪುರ ಮಾರ್ಗದ ಮಧ್ಯೆ ಜನನಿಬಿಡ ಪ್ರದೇಶದಲ್ಲಿ ಯಾರೋ ಅಪರಿಚಿತರು ನೂರಕ್ಕೂ ಹೆಚ್ಚು ಸತ್ತ ಕೋಳಿಗಳನ್ನು ಚರಂಡಿಗೆ ಎಸೆದು ಹೋಗಿದ್ದರು. ಈ ಸತ್ತ ಕೋಳಿಗಳಿಂದ ಈ ಪ್ರದೇಶ ದುರ್ನಾತದಿಂದ ತುಂಬಿತ್ತು.  ವಾಸನೆಯಿಂದ ರಸ್ತೆಯಲ್ಲಿ ಸಾರ್ವಜನಿ ಕರಿಗೆ ಓಡಾಡಲು ತೊಂದರೆಯಾಗು ತ್ತಿತ್ತು. ವಿಷಯ ತಿಳಿದ ಜಯಕರ್ನಾಟಕ ಸಂಘಟನೆಯ ಯುವ ಮುಖಂಡ ಕಾರ್ತಿಕ್ ಅಕ್ಲಾಪುರ ಕೂಡಲೇ ಸಂಬಂಧ ಪಟ್ಟ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದಾರೆ.



ತಕ್ಷಣ ಕಾರ್ಯ ಪ್ರವೃತ್ತರಾದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಚಂದ್ರಶೇಖರ್, ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ಯ ದೇವ್, ಸದಸ್ಯ ಹುಲ್ಲತ್ತಿ ದಿನೇಶ್‌ ಈ ಸತ್ತ ಕೋಳಿಗಳನ್ನು ಸ್ಥಳೀಯ ಕಾರ್ಮಿಕರ ಸಹಕಾರದಿಂದ ಗುಂಡಿ ತೆಗೆಸಿ ಹೂಳುವ ಮೂಲಕ ತಮ್ಮ ಕಾರ್ಯದಕ್ಷತೆಯನ್ನು ಮೆರೆದಿದ್ದಾರೆ.

ಈ ಕಾರ್ಯಕ್ಕೆ ಆ ಭಾಗದ ಅನೇಕ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಜಗದೀಶ್, ಅಣ್ಣಪ್ಪ, ಗೋಪಾಲಕೃಷ್ಣ, ಮನೋಜ್  ಸ್ಥಳೀಯರಾದ ಪುಟ್ಟಣ್ಣ ಹುಲ್ಲತ್ತಿ, ನಾಗರಾಜ್ ಹಿತ್ತಲಸರ , ಸದಾನಂದ, ವಾಸುದೇವ್ ಹೊಸಕೊಪ್ಪ ಮತ್ತಿತರರು ಇದ್ದರು.

✍🏻ಸುದ್ದಿ: ಶ್ರೀಕಾಂತ್ ವಿ. ನಾಯಕ್
           ತೀರ್ಥಹಳ್ಳಿ

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು