ಎಸ್ಎಸ್ಎಲ್ ಸಿ ರಿಸಲ್ಟ್ ನಲ್ಲಿ ಜಿಲ್ಲೆಗೆ "ಎ" ಗ್ರೇಡ್

 

ವಿಜಯ ಸಂಘರ್ಷ

ಶಿವಮೊಗ್ಗ : ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶದಲ್ಲಿ ಜಿಲ್ಲೆಗೆ "ಎ" ಗ್ರೇಡ್ ಲಭ್ಯವಾಗಿದೆ.



ಕೊರೋನ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಬಾರಿ ವಿನೂತನ ವಾಗಿ ನಡೆದಿತ್ತು. ಪರೀಕ್ಷೆಯಲ್ಲಿ ಜಿಲ್ಲೆ ಅತ್ಯುತ್ತಮ ಸಾಧನೆ ನಡೆದಿದೆ. 24 ಸಾವಿರ ವಿದ್ಯಾರ್ಥಿಗಳು ಎದುರಿಸಿದ್ದು ಇದರಲ್ಲಿ 22053 ಸಂಖ್ಯೆ ವಿದ್ಯಾರ್ಥಿ ಗಳು ಪಾಸ್ ಆಗಿದ್ದಾರೆ. 22053 ವಿದ್ಯಾರ್ಥಿಗಳು ಫ್ರೆಶ್ ವಿದ್ಯಾರ್ಥಿಗಳಾಗಿ ದ್ದರೆ ಉಳಿದವರು ರಿಪಿಟರ್ಸ್ ಆಗಿದ್ದಾರೆ.



22053 ವಿದ್ಯಾರ್ಥಿಗಳಲ್ಲಿ  ಎ+ ಗ್ರೇಡ್ ನಲ್ಲಿ ಪಾಸ್ ಆದವರು 1197 ವಿದ್ಯಾರ್ಥಿಗಳು, ಇದರಲ್ಲಿ  429 ಜನ, ವಿದ್ಯಾರ್ಥಿ/ನಿಯರು 768 ಜನರಾಗಿದ್ದಾರೆ.



ಎ ಗ್ರೇಡ್ ನಲ್ಲಿ 2482 ಜನ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಇದರಲ್ಲಿ 1014 ಜನ ವಿದ್ಯಾರ್ಥಿಗಳು, 1468 ಜನ ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.

ಬಿ ಗ್ರೇಡ್ ನಲ್ಲಿ 4963 ವಿದ್ಯಾರ್ಥಿಗಳು, 5085 ವಿದ್ಯಾರ್ಥಿನಿಯರು ಸೇರಿ ಒಟ್ಟು 10048 ಜನ ತೇರ್ಗಡೆಯಾದರೆ ಸಿ ಗ್ರೇಡ್ ನಲ್ಲಿ 4807 ವಿದ್ಯಾರ್ಥಿಗಳು 3519 ಜನ ವಿದ್ಯಾರ್ಥಿನಿಯರು ಸಿ ಗ್ರೇಡ್ ನಲ್ಲಿ ಪಾಸ್ ಆಗಿದ್ದಾರೆ. ಇದರಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚು ತೇರ್ಗಡೆಯಾಗಿದ್ದಾರೆ.

ನಗರದ ಗೋಪಾಳದ ರಾಮಕೃಷ್ಣ ಆಂಗ್ಲ ಪ್ರೌಢಶಾಲೆಯ ವಿನಯ್ ಜಿ ಹೆಬ್ಬಾರ್, ಸಾಗರ ತಾಲೂಕಿನ ಎಂ ಎಲ್ ಹಳ್ಳಿಯ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಕು.ಅಭೀಷ ಭಟ್, ತೀರ್ಥಹಳ್ಳಿಯ ಬಿ.ಎಸ್.ಶ್ರೀಶ, ಜಿಲ್ಲೆಯಲ್ಲಿ 625/625 ಅಂಕ ತೆಗೆದ ವಿದ್ಯಾರ್ಥಿಗಳಾಗಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು