ಅಧಿಕಾರಿಗಳಿಗೆ ಆಯನೂರ್ ಅವಾಜ್: "ನಾವೇನು ಶಾಸಕರಲ್ಲವೇನು?

 

ವಿಜಯ ಸಂಘರ್ಷ



ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪನವರ ನೇತೃತ್ವದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಇಬ್ಬರು ಶಾಸಕರಿಂದ ಗಲಾಟೆ ನಡೆದ ಘಟನೆ ಇಂದು ಜರುಗಿದೆ.

ಜಿಲ್ಲಾಧಿಕಾರಿ ಕಛೇರಿಯಲ್ಲಿಂದು ನಡೆದ ಸಭೆಯಲ್ಲಿ ಎಂಎಲ್ ಸಿ ಆಯನೂರು ಮಂಜುನಾಥ್ ಪ್ರೋಟೋಕಾಲ್ ವಿಚಾರದಲ್ಲಿ ಗಲಾಟೆ‌ ಮಾಡಿದ್ದಾರೆ.

"ನಾವೇನು ಶಾಸಕರಲ್ಲವೇನು? ಯಾರು ನೀವು? ತಮಾಷೆ ಮಾಡ್ತೀರಾ‌? ನಿಮ್ಮ ಕಚೇರಿಗೆ ಜನರನ್ನು ಕರೆದುಕೊಂಡು ಬಂದು ಗಲಾಟೆ‌ ಮಾಡಿದರೆ ಗೊತ್ತಾಗುತ್ತದೆ. ನಾವು ಶಾಸಕರಲ್ಲವೋ ಹೌದಾ ಅಂತ ಸಭೆಗೆ ಹೇಳಿ, ನಾವು ಮೂರು ಜನರು ಶಾಸಕರಲ್ಲವೋ ಹೇಳಿ ಜಿಲ್ಲಾಧಿಕಾರಿಯವರೆ?

ಪ್ರೋಟೋಕಾಲ್ ಪಾಲನೆ ಮಾಡಬೇಕಾಗಿದ್ದು ತಹಶಿಲ್ದಾರ್ ತಾನೇ? ಯಾಕೆ ನೀವು ಪ್ರೋಟೋ ಕಾಲ್ ಫಾಲೋ ಮಾಡಲ್ಲ" ಎಂದು ಗರಂ ಆದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಆಯನೂರು ಮಂಜುನಾಥ್ ಸಭೆಯಿಂದ ಹೊರನಡೆದರು. ಇವರಿಗೆ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹಾಗೂ ಆರ್.ಪ್ರಸನ್ನಕುಮಾರ್ ಸಾಥ್ ನೀಡಿ ಸಭೆಯಿಂದ ಹೊರ ನಡೆದರು.

ಜಿಲ್ಲಾಧಿಕಾರಿಗಳ ಸಭೆ ಅಥವಾ ತಾಲೂಕಿನ ಆಡಳಿತದಲ್ಲಿ ನಡೆಯುವಲ್ಲಿ ಸಭೆಗೆ ಆಹ್ವಾನ ಸಿಗುವುದಿಲ್ಲ. ಅದರ ಬಗ್ಗೆ ಮಾಹಿತಿ‌ ಕೊಡುವುದಿಲ್ಲ. ಯಾರಿಗಾದರೂ ಅನುದಾನ ಕೊಟ್ಟರೆ ಮಾಹಿತಿ‌ ನೀಡುವುದಿಲ್ಲ. ಪರಿಹಾರ ಧನ ನೀಡಿದರೆ ನಮಗೆ ಮಾಹಿತಿ ಸಿಗೋದಿಲ್ಲ. ನಾವೇನು ನಿಮಗೆ ಶಾಸಕರ ರೀತಿ ಕಾಣಿಸೋದಿಲ್ವಾ ಎಂದು ಆಯನೂರು ಮಂಜುನಾಥ್ ಹಾಗೂ ಇತರ ಶಾಸಕರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು