ವಿಜಯ ಸಂಘರ್ಷ
ಭದ್ರಾವತಿ: ಯುವಕ ಮಿತ್ರ ಗಿರೀಶ್ ಕೇವಲ ಒಂದು ಜಾತಿ ಅಥವಾ ಒಂದೇ ಸಂಘಟನೆಗೆ ಮೀಸಲಿರದೆ ಎಲ್ಲಾವರ್ಗ ದವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ ಹೊಂದಿದ್ದರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಇಂದು ನಗರದ ಪದ್ಮನಿಲಯ ಹೋಟೆಲ್ ಸುನಂದ ಹಾಲ್‌ನಲ್ಲಿ ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸ್ಮರಣಾರ್ಥ ಸವಿ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊರೋನಾ ಎಲ್ಲಾ ವಯಸ್ಸಿನವರನ್ನು ಬಲಿತೆಗೆದುಕೊಂಡಿದೆ. ಇದನ್ನು ತಡೆಯಲು ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸುವುದರಿಂದ ಮಾತ್ರ ನಿಯಂತ್ರಣ ಸಾಧ್ಯ. ಆದ್ದರಿಂದ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಉಪಯೋಗಿಸುವಂತೆ ಮನವಿ ಮಾಡಿದ ಅವರು ಇಂದು ಗಿರೀಶ್ ನಮ್ಮಮಧ್ಯ ಇಲ್ಲದಿದ್ದರೂ ಇದ್ದವರಾಗಿದ್ದಾರೆ ಎಂದರು.
ಗಿರೀಶ್ ರವರ ಪುತ್ರನ ವಿದ್ಯಾಭ್ಯಾಸ ಮುಗಿಯುವವರೆಗೂ ತಮ್ಮ ಹಾಗೂ ಉಳ್ಳವರ ಸಹಾಯದಿಂದ ಪೂರೈಸಲು ಸಹಕಾರ ನೀಡುವುದು ಮಾನವ ಧರ್ಮ. ಅದರಲ್ಲಿ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಭೋವಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್ ನಿಗಮದ ಸಹಾಯ ಹಾಗೂ ವೈಯಕ್ತಿಕವಾಗಿ 50 ಸಾವಿರ ರೂ ನೀಡುವುದಾಗಿ ತಿಳಿಸಿ, ನಿಗಮದಿಂದ ಬೋವಿ ಸಮಾಜಕ್ಕೆ ದೊರೆಯಲಿರುವ ಸೌಲಭ್ಯಗಳ ಕುರಿತಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಮಣಿಶೇಖರ್ ಮಾತನಾಡಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳಾನ್ನಾಡಿ ದರು. ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಬಸವರಾಜ ಬಿ. ಆನೇಕೊಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ, ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಮುಖಂಡರಾದ ಧರ್ಮರಾಜ್, ಕೆ. ಮಂಜುನಾಥ್, ಬಿ.ವಿ ಗಿರೀಶ್ ಕುಟುಂಬಸ್ಥರಾದ ತಂದೆ ವೆಂಕಟೇಶ್, ತಾಯಿ ಲಕ್ಷ್ಮಮ್ಮ, ಪತ್ನಿ ದೇವಿಕಾ ಗಿರೀಶ್, ಅಂಕಿತ ಮತ್ತು ಧನುಷ್, ಬಿ.ವಿ ಗಿರೀಶ್ ಅಭಿಮಾನಿಗಳ ಬಳಗದ ಶಿವಕುಮಾರ್, ವಿವೇಕ್ ಪ್ರಶಾಂತ್, ರಾಘವೇಂದ್ರ, ಸಂದೇಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಿ.ವಿ ಗಿರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗಿರೀಶ್ ಅವರ ಹೋರಾಟದ ಸ್ಮರಿಸಿದರು. ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795