ವಿಜಯ ಸಂಘರ್ಷ
ಸಾಗರ : ಮಲೆನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಜೋಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ವೀಕೆಂಡ್ ಗಳಲ್ಲಿ ಪ್ರವಾಸಿಗರು ರಾಜಾ, ರಾಣಿ ರೋರಲ್ ರಾಕೆಟ್ ಧುಮುಕುವ ಹಾಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಕಳೆದ ಭಾನುವಾರ 13 ಸಾವಿರ ಪ್ರವಾಸಿಗರು ಭೇಟಿ ನೀಡಿದರೆ, ಈ ಭಾನುವಾರ ಅಂದರೆ ನಿನ್ನೆ 16 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವಾರ 2.2 ಲಕ್ಷ ರೂ. ಸಂಗ್ರಹವಾದರೆ ನಿನ್ನೆ 2.57 ಲಕ್ಷ ಹಣ ಸಂಗ್ರಹವಾಗಿದೆ.
ಕೊರೋನಾ ಮೂರನೇ ಅಲೆಯ ಭೀತಿ ಇದ್ದರು, ಯಾವ ಲೆಕ್ಕವೇ ಇಲ್ಲ. ಕೆಲವರು ಮಾಸ್ಕ್ ಧರಿಸಿದರೆ ಕೆಲವರ ಮಾಸ್ಕ್ ಗಲ್ಲಕ್ಕೆ ಬಂದಿರುತ್ತದೆ. ಕೆಲವರು ಮಾಸ್ಕ್ ಧರಿಸದೆ ಜಲಪಾತವನ್ನ ಕಣ್ಣುತುಂಬಿಸಿಕೊಂಡಿದ್ದು ಇದೆ. ಸಾಮಾಜಿಕ ಅಂತರ ಮಾತ್ರ ಮಂಗಮಾಯವಾಗಿದೆ. ಇಲ್ಲೂ ಸಹ ಯಾವ ಕೊರೋನ ಮುಂಜಾಗ್ರತೆ ಕ್ರಮ ಇಲ್ಲವಾಗಿದೆ.
ನಿನ್ನೆ ಸಂಜೆಯ ವೇಳೆಗೆ 1600 ಜನ ಪ್ರವಾಸಿಗರು ನಾಲ್ಕು ಚಕ್ರವಾಹನದಲ್ಲಿ, 620 ಜನ ದ್ವಿಚಕ್ರ ವಾಹನದಲ್ಲಿ, 90 ಟೆಂಪೋ ಟ್ರಾವಲ್ಸ್ ಮತ್ತು ಮಿನಿ ಬಸ್ ಗಳಲ್ಲಿ, 17 ಜನ ಆಟೋಗಳಲ್ಲಿ ಹಾಗೂ 2 ದೊಡ್ಡ ಬಸ್ ಗಳಲ್ಲಿ ಸಾರ್ವಜನಿಕರು ಭೇಟಿ ನೀಡಿ ಜೋಗ ಜಲಪಾತವನ್ನ ಕಣ್ಣು ತುಂಬಿಸಿಕೊಂಡಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795