ಶಾಸಕ ಸಂಗಮೇಶ್ವರರಿಂದ ತುಂಬಿದ ಭದ್ರೆಗೆ ಭಾಗಿನಾರ್ಪಣೆ

 

ವಿಜಯ ಸಂಘರ್ಷ



ಭದ್ರಾವತಿ: ತುಂಬಿದ ಭದ್ರಾ ಜಲಾಶಯಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಬಾಗಿನ ಅರ್ಪಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾವು  ಶಾಸಕನಾದ ಅವಧಿಯಲ್ಲೆಲ್ಲ ಭದ್ರೆ ತುಂಬಿ ನಮ್ಮನ್ನು ಆಶೀರ್ವದಿಸಿದೆ. ಅದೇರೀತಿ ಮತದಾರ ದೇವರುಗಳ ಕೃಪೆಯಿಂದ ತುಂಬಿದ ಭದ್ರೆಗೆ ಬಾಗಿನ ಅರ್ಪಿಸುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂದರು.



ಸರ್ವಧರ್ಮ ಗುರುಗಳೊಂದಿಗೆ  ಶಾಸಕರು ಭದ್ರೆಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದರು. ನದಿ ತುಂಬುವುದ ರಿಂದ ಕುಡಿಯುವ ನೀರು, ರೈತರ ಬೆಳೆಗಳಿಗೆ ಹಾಗೂ ನೂರಾರು ಕಿಮೀ ದೂರದ ಕೈಗಾರಿಕೆಗಳಿಗೂ ಸಹ ಅನುಕೂಲವಾಗುತ್ತದೆ. ಪ್ರತಿವರ್ಷವೂ ಮಳೆಗಾಲದಲ್ಲಿ ಭದ್ರಾ ನದಿ ಹೀಗೆಯೇ ತುಂಬಿ ನದಿ ಆಶ್ರಿತ ಪ್ರದೇಶಗಳಲ್ಲಿ ಉತ್ತಮ ಬೆಳೆಯಾಗಲಿ, ಜನರ ಜೀವನ ಸದಾ ಹಸಿರಾಗಿರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ನಗರಸಭಾ ಸದಸ್ಯ ಬಿ.ಕೆ. ಮೋಹನ್, ಬಿ.ಕೆ.ಜಗದೀಶ್, ಬಿ. ಕೆ. ಶಿವಕುಮಾರ್, ಬಿ.ಎಸ್. ಗಣೇಶ್, ಬಸವೇಶ್, ನಂದೀಶ್, ರವಿ, ಮಂಜುನಾಥ್ ಸೇರಿದಂತೆ ಕುಟುಂಬ ಸದಸ್ಯರು ಬಾಗಿನ ಅರ್ಪಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಬಸಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ನೂರಾರು ಕಾರ್ಯಕರ್ತರು ಇದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು