ವಿಜಯ ಸಂಘರ್ಷ
ಶಿವ
ಮೊಗ್ಗ: ನಗರ ಮತ್ತು ಗ್ರಾಮಾಂತರ ಪ್ರದೇಶದ ಅಕ್ರಮ ಭೂ ಮಾಫಿಯಾ ಹತ್ತಿಕ್ಕಲು ಉನ್ನತ ಮಟ್ಟದ ಪೊಲೀಸ್ ತಂಡ ರಚಿಸಬೇಕು ಅಕ್ರಮ ಭೂ ಮಾಫಿಯಾದಲ್ಲಿ ತೊಡಗಿರುವವರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಕರವೇ ಯುವ ಘಟಕ ಆಗ್ರಹಿಸಿದೆ.
ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು,
ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಕಳೆದ 2010ರ ಸಾಲಿನಿಂದ 2021 ರ ಸಾಲಿನ ದಿನದವರೆಗೂ ನೂರಾರು ಎಕರೆ ಜಮೀನು, ಕೆರೆಗಳು, ಸಿಎ ನಿವೇಶನ ಗಳು, ಸಾರ್ವಜನಿಕ ಉದ್ಯಮ ವಲಯ ಸರ್ಕಾರಿ ಭೂಮಿ, ವಾರಸುದಾರರಿಲ್ಲದ ಭೂಮಿ, ಸ್ಮಶಾನ ಗೋಮಾಳದ ಭೂ ಪ್ರದೇಶಗಳಿಗೆ ಫೋರ್ಜರಿ ದಾಖಲಾತಿ ಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ಸಿದ್ಧಪಡಿಸಲಾಗದ ಟಿಪ್ಪಣಿ ಕೈಬರಹಗಳ ದಾಖಲೆಗಳ ಮುಖೇನ ನ್ಯಾಯಾಲಯ ಕ್ಕೂ ವಂಚಿಸಿದ್ದಾರೆಂದು ಆರೋಪಿಸಿದರು.
ತಾಲ್ಲೂಕು ಕಚೇರಿಯಲ್ಲಿ ಸಕ್ರಮ ಗೊಳಿಸಿರುವ ಪ್ರಕರಣಗಳು ಒಂದೇ ಕುಟುಂಬಕ್ಕೆ ಹತ್ತಾರು ಎಕರೆ ಬಗರ್ ಹುಕಂ ಜಮೀನಿಗೆ ಖಾತೆ ಪಹಣಿ ಮಾಡಿರುವುದು ಖರಾಬು ಜಮೀನು ಜಾಗಗಳಿಗೆ ಅತಿಕ್ರಮ ಪ್ರವೇಶಿಸಿ ಬೇಲಿ ಹಾಕಲಾಗದ ಜಮೀನುಗಳಿಗೆ ನಕಲಿ ದಾಖಲೆಗಳನ್ನೇ ಸಕ್ರಮ ಮಾಡಿರುವುದು ತಾಲ್ಲೂಕು ಕಚೇರಿಯಲ್ಲಿನ ಹಳೆಯ ಮ್ಯಾನ್ಯುಯಲ್ ಕಡತಗಳಿಗೆ ಅಕ್ರಮ ಎಂಟ್ರಿಗಳನ್ನು ಮಾಡಿ ದಾಖಲೆಗಳನ್ನು ಮಾಡಿರುವುದು, ನಗರ ಪ್ರದೇಶದಲ್ಲಿನ ಬಹುತೇಕ ಖಾಸಗಿ ಲೇ ಔಟ್ ಗಳ ಅಕ್ರಮಗಳಿಗೆ ಕಾರಣರಾಗಿರುವ ನೂರಾರು ಪ್ರಕರಣಗಳಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದರು.
ಕೂಡಲೇ ಅಕ್ರಮವೆಸಗಿರುವವರ ಮೇಲೆ ಕ್ರಮ ಕೈಗೊಂಡು ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿದ ವೇದಿಕೆಯು ತಂಡ ರಚಿಸಲು ವಿಳಂಬವಾದರೆ “ವಿಧಾನಸೌಧ ಚಲೋ” ಹೋರಾಟ ವನ್ನು ಕರವೇ ಯುವ ಸೇನೆಯು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795