ಸಚಿವ ಪ್ರಭು ಚೌಹ಼ಾಣ್‌ ರನ್ನ ಸಚಿವ ಸಂಪುಟದಿಂದ ಕೈಬಿಡಲು ಮಾದಿಗ ದಂಡೋರ ಆಗ್ರಹ

 

ವಿಜಯ ಸಂಘರ್ಷ



ಶಿವಮೊಗ್ಗ: ಸದಾಶಿವ ಆಯೋಗ ಜಾರಿ ಕುರಿತು ಅವೈಜ್ಞಾನಿಕ ಹೇಳಿಕೆ ನೀಡಿರುವ ಸಚಿವ ಪ್ರಭು ಚೌಹ಼ಾಣ್‌ರನ್ನ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕರ್ನಾಟಕ ಮಾದಿಗ ದಂಡೋರ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಸಿ. ಮೂರ್ತಿ ಒಳ ಮೀಸಲಾತಿ ಬೇಡ, ಸದಾಶಿವ ಆಯೋಗ ಬೇಡ ಎನ್ನುವವರು ಬೀದಿಗಿಳಿದು ಪ್ರತಿಭಟಿಸಲಿ ಅಥವಾ
ಮಾದಿಗ ದಂಡೋರದೊಂದಿಗೆ ಚರ್ಚೆಗೆ ಬರುವಂತೆ ಸವಾಲೆಸೆದಿದ್ದಾರೆ.

ನ್ಯಾ: ಎ.ಜೆ.ಸದಾಶಿವ ಆಯೋಗ ವರದಿಯ ವಿರುದ್ಧವಾಗಿ ಖಂಡಿಸಿರುವ ಪ್ರಭುಚೌಹ಼ಾಣ್ ಸ್ವಜನ ಪಕ್ಷಪಾತಿ ಮಂತ್ರಿಯಾಗಿದ್ದಾರೆ. ಒರ್ವ ಸಾಮಾಜಿಕ ನಾಯಕನಾಗಿರುವುದನ್ನ ಮರೆತು ಪಕ್ಷಪಾತಿಯಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಸುಮಂಜಸವಲ್ಲ.

ಆಯೋಗದ ವರದಿಯಲ್ಲಿ ಲಂಬಾಣಿ,  ಬೋವಿ ಅಥವಾ ಯಾವುದೇ ಜಾತಿಗಳನ್ನು ಕೈಬಿಡಬೇಕೆಂಬ ಉಲ್ಲೇಖವಿಲ್ಲ. ಎಸ್.ಸಿ, ಜಾತಿ ಒಳಗಿನ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗ ಬೇಕೆಂಬು ದನ್ನು ಸಚಿವರು ಅರ್ಥೈಸಿ ಕೊಳ್ಳಲಿ.

ಯಾವುದೇ ಜಾತಿಯನ್ನ ಕೈಬಿಡಬೇಕೆಂಬ ಬೇಡಿಕೆ ಮಾದಿಗ ದಂಡೋರದ್ದು ಅಲ್ಲ. ವಂಚಿತ ಜಾತಿಗಳಿಗೆ ಮೀಸಲಾತಿ ದೊರೆಯಬೇಕೆಂಬ ಆಶಯವೇ  ಆಯೋಗದ ಉದ್ದೇಶವಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ: ಬಿಕೃಷ್ಣಪ್ಪ ರವರು  ನ್ಯಾ: ಎ.ಜೆ. ಸದಾಶಿವ ನೇತೃತ್ವದ ಆಯೋಗ ರಚಿಸಿ ಸಂಕ್ಷಿಪ್ತವಾಗಿ ವರದಿ ಸಲ್ಲಿಸಲು ಸರ್ಕಾರ ಅವರಿಗೆ ಸೂಚಿಸಿದ ಮೇರೆಗೆ ಅವರು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ವರದಿ ಸಲ್ಲಿಸಿ ದಶಕಗಳೇ ಕಳೆದರೂ ಇದುವರೆವಿಗೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತೀಚಿಗೆ ಕೇಂದ್ರ ಸಜಿವ ಎ.ನಾರಾಯಣ ಸ್ವಾಮಿರವರು ಆಯೋಗದ ಕುರಿತು  ಸಮಗ್ರ ತನಿಖೆ ನಡೆಸಿ, ಅವಲೋಕಿಸಿ, ಚಿಂತಿಸಿ ಶೇ 4 ರ ವಾರು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಎಲ್ಲಾ ಪರಿಶಿಷ್ಟ ಜಾತಿಯ ನಾಯಕರು ಮತ್ತು ಶಾಸಕರೊಂದಿಗೆ ಚರ್ಚಿಸಿ, ಅವರ ಸಹಕಾರ ತೆಗೆದುಕೊಂಡು ವರದಿ ಅಂಗೀಕರಿಸಲು ನಾವು ಸಿದ್ಧನಾಗಿದ್ದೇವೆ ಎಂದು ಹೇಳಿಕೆ ನೀಡಿರುವುದು ಸಾಮಾಜಿಕನ್ಯಾಯ ಸಮ್ಮತವಾಗಿದೆ ಎಂದರು.

ಸಚಿವ ಚೌಹ್ಹಾಣ್ ಆಯೋಗದ ವರದಿ ಓದಿ ಅರ್ಥಮಾಡಿಕೊಳ್ಳದೆ  ಎಲ್ಲಾ ಉಪಜಾತಿಗಳಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕಾದ ಸಚಿವರು ಜವಾಬ್ದಾರಿ ಮರೆತು ಮಾಧ್ಯಮಗಳಲ್ಲಿ ಮಾತನಾಡು ತ್ತಿರುವುದನ್ನು ಸಮಾಜ ಉಗ್ರವಾಗಿ ಖಂಡಿಸುತ್ತದೆ, ಮುಖ್ಯಮಂತ್ರಿಯವರು ಇಂತಹ ಸ್ವಜನಪಕ್ಷಪಾತಿ, ಬೇಜವಾ ಬ್ದಾರಿ ಸಚಿವರನ್ನು ಸಚಿವ ಸಂಪುಟ ದಿಂದ ಕೈಬಿಡಬೇಕೆಂದು ಆಗಹಿಸಿರುವ ಸಮಾಜದ ಮುಖಂಡರು, ಸಚಿವರ ಇಂತಹ ಹೇಳಿಕೆಗಳು ಮುಂದುವರೆದಲ್ಲಿ  ರಾಜ್ಯಾದ್ಯಂತ ಅವರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು