ವಿಇಎಸ್ ಶಾಲಾ ಎಸ್ಎಸ್ಎಲ್ ಸಿ ಟಾಪರ್ಸ್ ಗಳ ಸಾಧನೆಗೆ ಅಭಿನಂದನೆ

 

ವಿಜಯ ಸಂಘರ್ಷ



ಭದ್ರಾವತಿ : ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ 2020-21ನೇ ಸಾಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರತಿಶತ 100 ಫಲಿತಾಂಶವನ್ನು ಪಡೆಯುವುದರ ಮೂಲಕ ವಿದ್ಯಾ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.



ಆಂಗ್ಲ ಮತ್ತು ಕನ್ನಡ ಪ್ರೌಢಶಾಲೆಯ ಒಟ್ಟು ಒಂಬತ್ತು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಇನ್ನುಳಿದಂತೆ  ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕನ್ನಡ ಪ್ರೌಢಶಾಲೆಯ ವಿ.ಎಸ್ ದೀಪಕ್ 613 ಅಂಕ, ಆಂಗ್ಲ ಪ್ರೌಢಶಾಲೆಯ ಕೆ.ಎನ್. ಸುಜಿತ್  605 ಅಂಕ, ಸೈಯದ್ ಐಮಾನ್  599 ಅಂಕ, ಸೈಯದ್ ರೇಯಾನ್  595 ಅಂಕ, ಜೆ. ಎ. ಪೂಜಾ. 557 ಅಂಕಗಳನ್ನು ಪಡೆದು ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಛೇರ್ಮನ್ ಬಿ.ಎಲ್.ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಧಾನ ಕಾರ್ಯದರ್ಶಿ ಡಿ. ಎಸ್.ರಾಜಪ್ಪ, ಖಜಾಂಚಿ ಎಸ್. ಕೆ. ಮೋಹನ್, ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾರೈಸಿ ಅಭಿನಂದಿಸಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು