ಜೋಗದಲ್ಲಿ ಕೋವಿಡ್ ನಿಯಮ ಉಲ್ಲಂಘನೆ : ಏಳು ಮಂದಿ ವಿರುದ್ಧ ಪ್ರಕರಣ ದಾಖಲು

 

ವಿಜಯ ಸಂಘರ್ಷ



ಶಿವಮೊಗ್ಗ: ಕೋವಿಡ್ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಜೋಗ ಜಲಪಾತ ವೀಕ್ಷಣೆಗೆ ಬಿಟ್ಟ ಆರೋಪ ದಡಿ ಡಿಸಿ ಸೂಚನೆ ಮೇರೆಗೆ ಜಲಪಾತದ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಜಲಪಾತ ವೀಕ್ಷಣೆಗೆ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಎರಡನೇ ಡೋಸ್ ಲಸಿಕೆ ಪಡೆದ ವರದಿ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಡಿಸಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿನ ಭದ್ರತಾ ಸಿಬ್ಬಂದಿಗಳು ಈ ಆದೇಶಕ್ಕೆಕ್ಯಾರೆ
ಅನ್ನದೆ ಬಂದ ಪ್ರವಾಸಿಗರನ್ನು ಒಳ ಬಿಡುತ್ತಿದ್ದರು.

ದಿಢೀರ್ ದಾಳಿಗೆ ಮುಂದಾದ ಅಧಿಕಾರಿಗಳು.

ಜೋಗ ಗೇಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿ ಗಳಿಗೆ ದೂರು ಬಂದಿತ್ತು. ಈ ಹಿನ್ನಲೆ ಯಲ್ಲಿ ಪರಿಶೀಲನೆ ನಡೆಸುವಂತೆ ಎಸ್ ಪಿ ರವರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಗರ ಡಿವೈಎಸ್ ಪಿ  ವಿಶೇಷ ತಂಡ ರಚಿಸಿ, ದಾಳಿಗೆ ಸೂಚಿಸಿದ್ದರು. ಪ್ರವಾಸಿಗರ ರೂಪದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರವಾಸಿಗರಂತೆ ಒಳಗೆ ಹೋದರು

ಪೊಲೀಸರ ವಿಶೇಷ ತಂಡ ಪ್ರವಾಸಿ ಗರಂತೆ ಜೋಗ ಜಲಪಾತಕ್ಕೆ ತೆರಳಿದ್ದರು. ಇವರಿಗೆ ಕೋವಿಡ್ ನೆಗೆಟಿವ್ ವರದಿ ಯಾಗಲಿ, ಲಸಿಕೆ ಪಡೆದ ರಿಪೋರ್ಟಾ ಗಲಿ ವಿಚಾರಿಸಲಿಲ್ಲ. ನೇರವಾಗಿ ಜೋಗ ಜಲಪಾತ ವೀಕ್ಷಣೆಗೆ ಕಳುಹಿಸಲಾಗಿತ್ತು. ಹಾಗಾಗಿ ಕೂಡಲೇ ಸೆಕ್ಯೂರಿಟಿ ಗಾರ್ಡ್ ಮತ್ತು ಅಂಗಡಿ ಮಾಲೀಕರೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಯಾರ ವಿರುದ್ಧ ಪ್ರಕರಣ?

ಜೋಗದ ಸೆಕ್ಯೂರಿಟಿಗೆ ನಿಯೋಜನೆ ಗೊಂಡಿದ್ದ ಸಿಬ್ಬಂದಿಗಳು, ಗೈಡ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಂದ್ರಶೇಖರ್, ಹೋಂ ಗಾರ್ಡ್ ಗಳಾದ ಮಂಜುನಾಥ, ಕೃಷ್ಣಪ್ಪ, ಮಂಜುನಾಥ, ಸೆಕ್ಯೂರಿಟಿ ಗಾರ್ಡ್ ಗಳಾದ ರಾಕೇಶ, ಪ್ರಭುದಾಸ, ಅಂಗಡಿ ಮಾಲೀಕ ಸಂಜು ಅಲಿಯಾಸ್ ಮಂಜುನಾಥ್ ಎಂಬುವವರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ಪ್ರಕರಣ ದಾಖಲು ಮಾಡಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು