ಅ: 2 ರಂದು ಶಾರದಾ ಅಪ್ಪಾಜಿ ಅಧಿಕೃತ ರಾಜಕೀಯ ಪ್ರವೇಶ..!

 

ವಿಜಯ ಸಂಘರ್ಷ



ಭದ್ರಾವತಿ :ಮಾಜಿ ಶಾಸಕ ದಿ: ಎಂ.ಜೆ. ಅಪ್ಪಾಜಿ ರವರ ಪತ್ನಿ ಶಾರದ ಅಪ್ಪಾಜಿ ಅ : 2 ರ ಗಾಂಧಿ ಜಯಂತಿಯಂದು ಅಧಿಕೃತವಾಗಿ ರಾಜಕಾರಣಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ.

ಇಂದು ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ರವರ ಮೊದಲ ವರ್ಷದ ಪುಣ್ಯಸ್ಮರಣೆ, ಶಕ್ತಿಧಾಮ ಉದ್ಘಾಟನೆ ಹಾಗು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರ ಅಪೇಕ್ಷೆಯಂತೆ ಅಪ್ಪಾಜಿ ಅವರ ಸ್ಥಾನ ತುಂಬಲು ನಾನು ಸಿದ್ದವಾಗಿದ್ದೇನೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮುಖ್ಯವಾಗಿ ಕ್ಷೇತ್ರದ ಮತದಾರರು ನನ್ನ ಪರವಾಗಿದ್ದಾರೆ. ಈ ಹಿನ್ನಲೆಯಲ್ಲಿ ಅ: 2 ರಂದು  ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನನ್ನ ರಾಜಕೀಯ ಜೀವನ ಆರಂಭಿಸುವುದಾಗಿ ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಪುತ್ರ ಎಂ.ಎ.ಅಜಿತ್, ಜಿಪಂ ಮಾಜಿ ಸದಸ್ಯರಾದ ಎಸ್.ಕುಮಾರ್, ಜೆ.ಪಿ. ಯೋಗೇಶ್, ಎಸ್.ಮಣಿಶೇಖರ್,  ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾ ಮೂರ್ತಿ, ನಗರಸಭೆ, ತಾಪಂ, ಎಪಿಎಂಸಿ, ಹಾಲು ಒಕ್ಕೂಟಗಳ ಚುನಾಯಿತ ಪ್ರತಿನಿಧಿಗಳು, ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಹಸ್ರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು