ವಿಜಯ ಸಂಘರ್ಷ
ಭದ್ರಾವತಿ : ಕಾಂಗ್ರೆಸ್ ಅಭ್ಯರ್ಥಿ ಯೋರ್ವರ ಮರಣದಿಂದ ವಾರ್ಡ್ ನಂಬರ್ 29 ರಲ್ಲಿ ತೆರವಾಗಿದ್ದ ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ವೋಟಿಂಗ್ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ತಾಲೂಕಾಡಳಿತ ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಕಣದಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ನಾಳೆ ಮತದಾರ ಪ್ರಭುಗಳು ಅಭ್ಯರ್ಥಿಗಳ ಹಣೆಬರಹ ಬರೆದು ಮತ ಪೆಟ್ಟಿಗೆಯಲ್ಲಿ ಭದ್ರಗೊಳಿಸಲ್ಲಿದ್ದಾರೆ.
ಶುಕ್ರವಾರ (ನಾಳೆ)ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದ್ದು, ನ್ಯಾಯ ಸಮ್ಮತ, ಶಾಂತಿಯುತ ಮತದಾನಕ್ಕಾಗಿ ಸಾಕಷ್ಟು ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ.
ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಪಕ್ಷಗಳ ಮೂವ್ವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮಹಿಳಾ 1716, ಪುರುಷ 1707 ಇತರೆ ಸೇರಿ ಒಟ್ಟು 3423 ಸಾವಿರ ಮತದಾರರು ತಮ್ಮ ಹಕ್ಕನ್ನ ಚಲಾಯಿಸಲಿದ್ದಾರೆ. ಇನ್ನು ಚುನಾವಣೆ ಹಿನ್ನೆಲೆಯಲ್ಲಿ ವೋಟಿಂಗ್ ಮಸ್ಟರಿಂಗ್ ಕರ್ತವ್ಯಕ್ಕೆ 20 ಪೋಲಿಂಗ್ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. 8 ಮಂದಿ ಪೊಲೀಸ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಜರುಗುವ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚುನಾವಣೆಯನ್ನ ಶಾಂತಿಯುತ, ನ್ಯಾಯಸಮ್ಮತ, ನಿರ್ಭಿತಿಯಿಂದ ನಡೆಸಲು ತಾಲೂಕು ಆಡಳಿತ, ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಸಜ್ಜಾಗಿದೆ. ಮತದಾರನ ಮನ ಗೆದ್ದು ನಗರಸಭೆ ಗದ್ದುಗೆ ಏರಲು ಗುದ್ದಾಟ ನಡೆಸಿರುವ ಕಣದಲ್ಲಿರುವ ಅಭ್ಯರ್ಥಿಗಳಿಗೆ ಇದೀಗ ಟೆನ್ಷನ್ ಶುರುವಾಗಿದೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795