ರಿಪ್ಪನ್ ಪೇಟೆಯಲ್ಲಿ ಶೌಚಾಲಯಕ್ಕೆ ಹೈಟೆಕ್ ಸ್ಪರ್ಶ

 

ವಿಜಯ ಸಂಘರ್ಷ



ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ  ಶಿಥಿಲಗೊಂಡಿದ್ದ ಕಟ್ಟಡವನ್ನು ನೆಲಸಮಗೊಳಿಸಿ, ಹದಿನೈದು ಲಕ್ಷ ರೂ ವೆಚ್ಚದ ನೂತನ  ಅತ್ಯಾಧುನಿಕ ಸುಸಜ್ಜಿತ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಲಿದೆ.

ಸುತ್ತಮುತ್ತ ನೂರಾರು ಹಳ್ಳಿಗಳ  ಕೇಂದ್ರ ಬಿಂದುವಾಗಿರುವ ಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಹಳೆಯ ಸಾರ್ವಜನಿಕ ಶೌಚಾಲಯ ಪಾಳು ಬಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ಯಲ್ಲಿದ್ದು, ಬೀಳುವ ಹಂತದಲ್ಲಿತ್ತು. ಹಳೆಯ ಕಟ್ಟಡವನ್ನು ನೆಲಸಮ ಮಾಡು ವ ಮೂಲಕ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ.



ರಿಪ್ಪನ್ ಪೇಟೆಯ ಗ್ರಾಮಾಡಳಿತ ಮತ್ತು ಜನಪ್ರತಿನಿದಿಗಳು ಶೌಚಾಲಯ ನಿರ್ಮಾಣಕ್ಕೆ ಅನುದಾನ ತರಿಸಿದ್ದು. ಶೌಚಾಲಯದ ಕಾರ್ಯ ತ್ವರಿತವಾಗಿ ನಡೆಯುತ್ತಿದೆ.

ಹೊಸ ಕಟ್ಟಡದ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ನಿರ್ಮಿಸುವುದಾಗಿ ಗ್ರಾಮಾಡಳಿತ ಭರವಸೆ ನೀಡಿದೆ.

ಈ ಸಂಬಂಧ ಹಿಂದೆಯೇ ಕೆಲ ಮಾಧ್ಯಮಗಳಲ್ಲಿ ಸಾರ್ವಜನಿಕ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲದೇ ಶಿಥಿಲಗೊಂಡಿದ್ದು “ಗಬ್ಬು ನಾರುತ್ತಿದೆ ರಿಪ್ಪನ್ ಪೇಟೆಯ ಶೌಚಾಲಯ” ಎಂಬ ಅಡಿ ಬರಹ ದಲ್ಲಿ ಸುದ್ದಿ ಬಿತ್ತರಿಸಿತ್ತು.

ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಸಾರ್ವಜನಿಕರಿಗೆ ಅನಾನುಕೂಲ ವಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ಶೌಚಾಲಯವನ್ನು ನಿರ್ಮಿಸಲಿದ್ದು ಜನರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗ್ರಾಮಾಡಳಿತ ತಿಳಿಸಿದೆ.

ಒಟ್ಟಿನಲ್ಲಿ ಪೇಟೆಯಲ್ಲಿ ಶಿಥಿಲಗೊಂಡಿದ್ದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಮುಂದಾಗುವ ಭಾರಿ ಅನಾಹುತಗಳನ್ನು ತಪ್ಪಿಸಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ಗ್ರಾಮಾ ಡಳಿತದ ಕಾರ್ಯ ವೈಖರಿ  ಸಾರ್ವಜನಿಕ ರ ಪ್ರಶಂಸೆಗೆ ಪಾತ್ರವಾಗಿದೆ.

ರಫಿ ರಿಪ್ಪನ್ ಪೇಟೆ 

ವಿಜಯ ಸಂಘರ್ಷಕ್ಕೆ ಸುದ್ದಿ 

ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು