ಹಿಂದೂ ಸಂಘಟನೆಗೆ ಹೊಸ ಭಾಷ್ಯ ಬರೆದ ಪಂಡಿತ್ ದೀನ್ ದಯಾಳ್ : ಹೆಚ್.ಎನ್.ಮಂಜುನಾಥ್

 

ವಿಜಯ ಸಂಘರ್ಷ



ಶಿವಮೊಗ್ಗ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರು ದೇಶ ಪ್ರೇಮ, ಹಿಂದೂ ಸಂಘಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿ ಅದರನ್ವಯ ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಜನಸಂಘ ಪಕ್ಷ ಕಟ್ಟಲು ಪ್ರಮುಖ ಪಾತ್ರವಹಿಸಿ ದ್ದರು ಎಂದು ಪತ್ರಕರ್ತ ಎಚ್.ಎನ್. ಮಂಜುನಾಥ್ ಬಣ್ಣಿಸಿದರು.

ಇಂದು ನಗರದ ಪಾಲಿಕೆ 29 ನೇ ವಾರ್ಡಿನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಕಾರ್ಯಕರ್ತರಾಗಿ, ಸೈದ್ದಾಂತಿಕ ಬರಹಗಾರರಾಗಿ, ಪತ್ರಕರ್ತರಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ. ಅವರು ಯಾವಾಗಲೂ ದೇಶ ಪ್ರೇಮ.ದೇಶಿಯ ಉತ್ಪಾದನೆ, ಬಳಕೆ ಬಗ್ಗೆ ತಿಳಿಹೇಳುತ್ತಾ, ಪಾಶ್ಚಾತ್ಯ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದರು.

ಇಂದಿನ ಭಾರತೀಯ ಜನತಾ ಪಕ್ಷವನ್ನು ಸೈದ್ದಾಂತಿಕ ನೆಲೆಗಟ್ಟಿನ ಅಡಿಪಾಯ ಹಾಕಿಕೊಟ್ಟ ಮಹಾನ್ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸೇವೆ ಅನನ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷ ಶಿವರಾಜ್.ಜೆ.ರವಿಕುಮಾರ್.ಮಂಜುನಾಥ. ಶೇಖರ್ ಮತ್ತಿತರರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು