ವಿಜಯ ಸಂಘರ್ಷ
ಭದ್ರಾವತಿ: ವಿದ್ಯಾರ್ಥಿಗಳು ಭವಿಷ್ಯದ ಪ್ರತಿಫಲ ಪಡೆಯಲು ಪ್ರಸ್ತುತಕ್ಕ ನುಗುಣವಾಗಿ ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳಬೇಕು ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
ಕಾಲೇಜಿನಲ್ಲಿ ಐಕ್ಯೂಎಸಿ ಹಾಗು ಐಸಿಟಿ ವಿಭಾಗಗಳ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020 ವಿಷಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೊಸ ವಿಷಯಗಳಿಗೆ ಹೊಂದಿಕೊಳ್ಳು ವುದು ಕಷ್ಟವಾದರೂ ಅದಕ್ಕೆ ಹೊಂದಿ ಕೊಳ್ಳುವುದರಿಂದ ಸಿಗುವ ಪ್ರತಿಫಲ ಹೆಚ್ಚು. ಹಾಗಾಗಿ ನೂತನ ಶಿಕ್ಷಣ ನೀತಿಯನ್ನು ಅರ್ಥಮಾಡಿ ಕೊಂಡು ಅನುಷ್ಠಾನಗೊಳಿಸಿ ದೇಶದ ಸರ್ವಾಂಗೀಣ ಪ್ರಗತಿಗೆ ನಮ್ಮದೇ ಆದ ಕೊಡುಗೆಯನ್ನು ಸಲ್ಲಿಸಬೇಕೆಂದರು.
ಡಾ. ಕಸ್ತೂರಿ ರಂಗನ್ ವರದಿ ಆಧರಿಸಿ ಎಲ್ಲಾ ಹಂತಗಳಲ್ಲೂ ಚರ್ಚಿಸಿ ಕೂಲಂಕುಶವಾಗಿ ಅಧ್ಯಯನ ನಡೆಸಿ ಈ ನೀತಿಯನ್ನು ಜಾರಿಗೆ ತರಲಾಯಿತು. ಶಾಲಾ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮ ಸುಧಾರಣೆ, ಆಡಳಿತ ಮತ್ತು ನಿಯಂತ್ರಣ, ವಿದ್ಯಾರ್ಥಿಯ ಸಾಮರ್ಥ್ಯ ವನ್ನು ಗುರುತಿಸುವುದು ಮತ್ತು ಪೋಷಿಸುವುದು. ನಮ್ಯತೆ ಹಾಗು ಸರ್ವಾಂಗೀಣ ಪ್ರಗತಿ ಹೊಸ ಶಿಕ್ಷಣ ನೀತಿಯ ಗುರಿಗಳಾಗಿವೆ ಎಂದರು.
ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿಯ ಅಧಿಕಾರಿ ವಿದ್ಯಾಮರಿಯಾ ಜೋಸೆಫ್, ಪ್ರೊ. ಉಮೇಶ್ಕುಮಾರ್, ಡಾ. ಬಿ.ಜಿ ಅಮೃತೇಶ್ವರ್, ಪ್ರೊ. ಮಲ್ಲಪ್ಪ, ಡಾ. ಬಿ. ಬಸವರಾಜಪ್ಪ, ಡಾ. ರಾಜಶೇಖರ್, ಪ್ರೊ. ಎನ್.ಯು.ಆರ್ ಹೆಗ್ಗಡೆ ಉಪಸ್ಥಿತರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795