ಸರಕಾರಿ ಶಾಲೆಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ: ರಾಜು

 

ವಿಜಯ ಸಂಘರ್ಷ



ಶಿಕಾರಿಪುರ : ಸರಕಾರಿ ಶಾಲೆಗಳು ಆಧುನಿಕವಾಗಿ ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದು ಕೊಡುಗೈ ದಾನಿ ರಾಜು ಹೇಳಿದರು.



ಇಂದು ತಾಲೂಕಿನ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ಶುದ್ದಿಕರಿಸುವ ಯಂತ್ರ ನೀಡಿ ಮಾತನಾಡಿದರು.

ತಾವು ಓದುವ ಶಾಲೆಯಲ್ಲಿ ಸ್ವಚ್ಛತೆ ಆದ್ಯತೆ ನೀಡಬೇಕು. ಇಂದಿನ ಪೈಪೋಟಿ ಯುಗದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು. ತಾವು ಸಹ ಸರಕಾರಿ ಶಾಲೆಯಲ್ಲಿಯೇ ಓದಿದ್ದು. ಇಲ್ಲಿನ ಮಕ್ಕಳ ಸ್ಥಿತಿ ಗತಿ ಅರಿತ್ತಿದ್ದೇನೆ. ಈ ಉದ್ದೇಶದಿಂದ  ತಮ್ಮದೊಂದು ಅಳಿಲು ಸೇವೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಾನು ಸದಾಸಿದ್ದ ಎಂದರು .

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಮಾತನಾಡಿ, ಕೋವಿಡ್ ನಿಂದಾಗಿ ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ತೆರೆಯದಂತಾಗಿತ್ತು.ಈಗಷ್ಟೆ ಶಾಲೆಗಳು  ಆರಂಭವಾಗಿವೆ. ಮಕ್ಕಳು ಕೂಡ ಆಸಕ್ತಿಯಿಂದ ಶಾಲೆಗೆ ಬರುತಿದ್ದು ಸಂತಸದ ವಿಚಾರ. ಇಂತಹ ಸಮಯದಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಲ್ಲಿ ಶುದ್ದಿಕರಿಸಿದ ನೀರಿನ ಸೌಕರ್ಯಕ್ಕಾಗಿ ಯಂತ್ರವನ್ನು ಶಾಲೆಗೆ ದೇಣಿಗೆ ನೀಡಿ ಮಾನವೀಯತೆ ಮೆರೆದ ನಗರದ ರಾಜು ರವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಯೋಗೇಶ್, ಮುಖ್ಯೋಪಾಧ್ಯಾ ಯಿನಿ ಗಾಯಿತ್ರಿಬಾಯಿ , ಶಿಕ್ಷಕರಾದ ಪ್ರಕಾಶ್,ವಿ.ಸುರೇಶ್,ಸರಸ್ವತಿ ಮತ್ತಿತರಿದ್ದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು