ವಿಜಯ ಸಂಘರ್ಷ
ಕೊರಟಗೆರೆ : ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿಯ ಗಟ್ಲಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಚಿರತೆಯೊಂದು ಗ್ರಾಮದ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿತ್ತು ಗ್ರಾಮಸ್ಥರು ಹಾಗೂ ಮತ್ತು ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಗ್ರಾಮದ ಸೂಳೇಕಲ್ಲು ಮೀಸಲು ಅರಣ್ಯ ಪ್ರದೇಶದಲ್ಲಿ ಬೊನ್ ಇಟ್ಟು ಚಿರತೆಯನ್ನು ಹಿಡಿಯಲು ಮುಂದಾದ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಇಂದು ಆಹಾರ ಹುಡುಕಿ ಬಂದ ಚಿರತೆಯು ಬೊನ್ ನಲ್ಲಿ ಸೆರೆಯಾಗಿದೆ. ನಂತರ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸುರಕ್ಷಿತವಾಗಿ ಚಿರತೆಯನ್ನು ಬಂದಿಸಿ ದೂರದ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡಲು ಮುಂದಾದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ನಾಗರಾಜು, ಸಿಬ್ಬಂದಿಗಳಾದ ಬಿ.ಸಿ. ಮಂಜುನಾಥ್, ವೆಂಕಟರಾಮು, ಚಾಂದ್ ಬಾಷಾ, ಜಿ.ಬಿ. ನರಸಿಂಹಯ್ಯ,ನಾಗರಾಜು ಹಾಗೂ ಗ್ರಾಮಸ್ಥರು ಸಾರ್ವಜನಿಕರು ಸ್ಥಳದಲ್ಲಿದ್ದರು.
ವರದಿ :ಮಂಜುಸ್ವಾಮಿ.ಎಂ.ಎನ್.
ಜಿಲ್ಲಾ ವರದಿಗಾರರು. ತುಮಕೂರು.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795