ಭದ್ರಾವತಿ-ಗಂಡ ಮೃತಪಟ್ಟು ವಾರ ಕಳೆಯುವುದರೊಳಗೆ ಪತ್ನಿಯೂ ಸೂಸೈಡ್..!

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಗಂಡ ಮೃತಪಟ್ಟು ವಾರ ಕಳೆಯುವುದರೊಳಗೆ ಹೆಂಡತಿಯೂ ನೇಣಿಗೆ ಶರಣಾದ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ.

ಸ್ವಾತಿ(26) ನೇಣಿಗೆ ಶರಣಾದ ಗೃಹಿಣಿ ನನ್ನ ಸಾವಿಗೆ ಪೊಲೀಸ್ ಮೋಹನ್ ಕಾರಣ ಎಂದು ಸ್ವಾತಿ ತನ್ನ ತಾಯಿಗೆ ಮೇಸೆಜ್ ಮಾಡಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಫುಲ್ ಡ್ರಿಂಕ್ಸ್ ಮಾಡಿ ನನ್ನ ಗಂಡ ಜಗದೀಶ್ ಸಾವನ್ನಪ್ಪಿದ್ದಾರೆ. ಅವರು ಹೆದರಿಸಲು ಹೋಗಿ, ಸುಸೈಡ್ ಮಾಡಿಕೊಂಡರು. ಆದರೆ, ಮೋಹನ್ ಎಂಬುವರು ಜನರ ಬಳಿ ಕೆಟ್ಟದಾಗಿ ಹೇಳುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ನನಗೆ ಮೇಸೆಜ್ ಮಾಡಿದ್ದರು, ನಾನು ಬ್ಲಾಕ್ ಮಾಡಿದ್ದೆ, ಆ ಸಿಟ್ಟಿಗೆ ನನ್ನ ಬಗ್ಗೆ ಜನಗಳ ಬಳಿ ಮೋಹನ್ ಕೆಟ್ಟದಾಗಿ ಹೇಳುತ್ತಿದ್ದಾರೆ. ಅವನನ್ನ ಸುಮ್ಮನೆ ಬಿಡಬೇಡಿ” ಎಂದು ಸ್ವಾತಿ ಮೆಸೇಜ್ ಮಾಡಿದ್ದಾರೆ.

ಸ್ವಾತಿ ಮೂಲತಃ ತಾಲೂಕಿನ ಗೋಣಿಬೀಡು ಗ್ರಾಮದವರಾಗಿದ್ದಾರೆ. ಮೃತ ದಂಪತಿಗಳು ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದರು.

ಸ್ವಾತಿ ಮೃತದೇಹ ಭದ್ರಾವತಿ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಸ್ವಾತಿ ಪತಿ ಜಗದೀಶ್ ಫೆ.14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಎಸ್ಐಎಸ್ಎಫ್ ಶಿವಮೊಗ್ಗ ಯೂನಿಟ್‌ನಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದ ಜಗದೀಶ್ ಮದ್ಯವ್ಯಸನ ಮತ್ತು ಜೀವನದಲ್ಲಿ ಜಿಗುಪ್ಸೆಗೊಂಡು ಹೊಸ ಸಿದ್ದಾಪುರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿ ದ್ದರು. ಈ ಸಂಬಂಧ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು