ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಸೈಲ್-ವಿಐಎಸ್‌ಪಿ ವತಿಯಿಂದ ಸಾಂಸ್ಥಿಕ ಸಾಮಾಜಿಕ ಕಳಕಳಿಯ (CSR) ಅಂಗವಾಗಿ ಶನಿವಾರ ತಾಲ್ಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ನಡೆಯಿತು.
ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಭದ್ರಾವತಿಯ ವಿಐಎಸ್ಎಲ್ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಇಸ್ಪಾತ್ ಮಹಿಳಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಿತು.
ಶಿಬಿರದಲ್ಲಿ ಹೃದಯಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದಂತಹ ಕ್ಷೇತ್ರಗಳಲ್ಲಿ ತಜ್ಞ ವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು.
ಇದರ ಅಂಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟೋಕಾರ್ಡಿಯೋ ಗ್ರಾಮ್ (ಇಸಿಜಿ) ಮತ್ತು ಸ್ತ್ರೀ ಸಂಬಂಧಿತ ರೋಗಗಳ ತಪಾಸಣೆಗಳನ್ನು ಮಾಡಲಾಯಿತು.
ಇಸ್ಪಾತ್ ಮಹಿಳಾ ಸಮಾಜದ ಅಧ್ಯಕ್ಷ ರಾದ ನಿಶಾ ಅನೂಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಐಎಸ್ ಎಲ್ ಕಾರ್ಖಾನೆಯ ಪ್ರಭಾರಿ ಕಾರ್ಯಪಾಲಕ ನಿರ್ದೆಶಕ ರಾದ ಬಿ.ವಿಶ್ವನಾಥ, ಟಿ.ರವಿಚಂದ್ರನ್, ಪ್ರಭಾರಿ ಮಹಾ ಪ್ರಬಂಧಕರು (ಸ್ಥಾವರ), ಡಾ॥ ಕೆ.ಎಸ್. ಸುಜೀತ್ ಕುಮಾರ್, ಡಾ॥ ಟಿ.ಎನ್. ಸುಷ್ಮಾ, ಡಾ॥ ಎಸ್.ಎನ್. ಸುರೇಶ್, ಇಸ್ಪಾತ್ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಪಂಕಜ ವಿಶ್ವನಾಥ್, ಸುಗಂಧೀ ರವಿಚಂದ್ರನ್, ಕಾರ್ಯದರ್ಶಿಯಾದ ಈಶ್ವರೀ ನಾಥನ್, ಜಂಟಿ ಕಾರ್ಯದರ್ಶಿ ಶ್ರವಂತಿ ರೆಡ್ಡಿ, ಎಮ್.ಎಲ್. ಯೋಗೀಶ್, ಗ್ರಾಮದ ಪ್ರಮುಖರಾದ ಶಿವುಮೇಸ್ತಿ, ಮುರುಗೇಶ, ರಾಮಲಿಂಗಮ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ|| ಪ್ರಶಾಂತಿ, ಡಾ॥ ಸಹನ ಪೂಜಾರಿ, ಕು.ತಹೀನಾ, ಕು. ಶಿಲ್ಪಿ ಮತ್ತು ಶ್ರೀ ಗಣೇಶ್, ಶಂಕರ ಕಣ್ಣಿನ ಆಸ್ಪತ್ರೆಯ ಡಾ:ಲಕ್ಷಿತ, ಪ್ರದೀಪ್ ಮತ್ತು ತಂಡದವರು ಉಪಸ್ಥಿತರಿದ್ದರು. ಗ್ರಾಮದ 196 ಜನರು ಶಿಬಿರದ ಸದುಪಯೋಗಪಡಿಸಿಕೊಂಡರು.
ವಿಐಎಸ್‌ಎಲ್ ವತಿಯಿಂದ ಉಚಿತ ಔಷಧಿಗಳನ್ನು ವಿತರಿಸಲಾಯಿತು.