ಭದ್ರಾವತಿ- ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಪೊಲೀಸರಿಂದ ರಕ್ಷಣೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಯುವಕನೊಬ್ಬನು ರೈಲ್ವೆ ‌ಟ್ರ್ಯಾಕ್ ಮೇಲೆ‌ ಮಲಗಿ ಆತ್ಮಹತ್ಯೆ ಯತ್ನಿಸಿದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನ ರಕ್ಷಣೆ ಮಾಡಿರುವ ಘಟನೆ ನಗರದ ಲೋಯರ್ ಹುತ್ತಾ ಬಳಿ (ಫೆ.22) ನಡೆದಿದೆ.

ಮಾಹಿತಿ ಬಂದ ಕೂಡಲೇ ರಾತ್ರಿ ಗಸ್ತಿನಲ್ಲಿದ್ದ ನ್ಯೂಟೌನ್ ಪೊಲೀಸರಾದ ನಾಗರಾಜ ಹಾಗೂ ಸಲೀಂ ಅವರು ಕೂಡಲೇ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಿಂದ ಯುವಕನನ್ನ ರಕ್ಷಣೆ ಮಾಡಿ ಠಾಣೆಗೆ ಕರೆತಂದು ಯುವಕನಿಗೆ ಮನವೊಲಿಸಿ, ಪೋಷಕರನ್ನ ಕರೆಸಿ ಯುವಕನನ್ನ ಮನೆಗೆ ಕಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು