ವಿಜಯ ಸಂಘರ್ಷ
ಭದ್ರಾವತಿ : ಪವಾಡಗಳ ಬಯಲು ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಜನರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವನೆ ಬಿತ್ತುವ ಕೆಲಸವನ್ನು ಹುಲಿಕಲ್ ನಟರಾಜ್ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸ್ಥಾಪಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿ ದ್ದಾರೆಂದು ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಹೇಳಿದರು.
ಅವರು ನಗರದ ಜಯಶ್ರೀ ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಮೌಢ್ಯ,ಅಜ್ಞಾನ,ಮೂಢನಂಬಿಕೆ ವಿರುದ್ಧದ ಹೋರಾಟ ಹಾಗೂ ಮಾನಸಿಕ ನೆಮ್ಮದಿಯ ಜೀವನಕ್ಕಾಗಿ ತುಡಿಯುವ ಮನಸುಳ್ಳವರು ಸಂಘ ಟನೆಯಲ್ಲಿ ಪಾಲ್ಗೊಳ್ಳುವ ಅವಕಾಶ ವಿದೆ. ಇದರ ಸದುದ್ದೇಶದಿಂದ ತಾಲ್ಲೂಕಿನ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿ, ಈಗಾಗಲೇ ರಾಜ್ಯಾದ್ಯಂತ ಸಂಘಟನೆಯ ಬಲವರ್ಧನೆಗೆ ಮುಂದಾಗಿರುವುದಾಗಿ ತಿಳಿಸಿದರು.
ಇದೆ ಸಂದರ್ಭದಲ್ಲಿ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಪರಿಷತ್ ನ ತಾಲೂಕು ಅಧ್ಯಕ್ಷರಾಗಿ ಸಿ.ಜಯಪ್ಪ ಹೆಬ್ಬಳಗೆರೆ, ಉಪಾಧ್ಯಕ್ಷರಾಗಿ ಎಸ್.ಉಮಾ, ಜಿ.ರಾಜು. ಪ್ರಧಾನ ಕಾರ್ಯದರ್ಶಿ ಎ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಟಿ.ಜಿ.ಬಾಬು, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಕುಮಾರ್, ಇಂದಿರಾ, ಖಜಾಂಚಿ ಈಶ್ವರಪ್ಪ,ಸಂಚಾಲಕರಾಗಿ ಜ್ಯೋತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗದೀಶ್, ರುದ್ರೇಶ್, ಗುರುಸಿದ್ದಪ್ಪ, ರಾಜು ಜಂಕ್ಷನ್ ಹಾಗೂ
ಮಾಧ್ಯಮ ಕಾರ್ಯದರ್ಶಿಯಾಗಿ ಆರ್.ವಿ. ಕೃಷ್ಣ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ರಾಜೆಂದ್ರ ಆವಿನಹಳ್ಳಿ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಕೋಗಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮ್ ನಾಥ್ ಉಪಸ್ಥಿತರಿದ್ದರು.
ವಿಜಯ ಸಂಘರ್ಷಕ್ಕೆ ಸುದ್ದಿ & ಜಾಹೀರಾತು ನೀಡಲು ಕರೆ ಮಾಡಿ +91 9743225795