"ಕ್ಷೇತ್ರದ ಶಾಶ್ವತ ಅಭಿವೃದ್ಧಿ ಕಾರ್ಯಗಳಲ್ಲಿ ಅಪ್ಪಾಜಿ ಇಂದಿಗೂ ನಮ್ಮೊಂದಿಗಿ ದ್ದಾರೆ.. ನಗರಸಭಾ ಸದಸ್ಯ ಬಸವರಾಜ್"
ಮಾಜಿ ಶಾಸಕರಾದ ಎಂ.ಜೆ. ಅಪ್ಪಾಜಿ ಹತ್ತಿರದ ಒಡನಾಟ. ಯಾವುದೇ ಜಾತಿ, ಧರ್ಮ ಇಲ್ಲದ ಅವರಲ್ಲಿನ ಬಡವರ ಬಗೆಗಿನ ಕಾಳಜಿ, ಹೋರಾಟದ ಗುಣಗಳಿಂದ ಆಕರ್ಷಿತನಾಗಿ ಅವರ ಒಡನಾಟ ಬಯಸಿ, ಅಧಿಕಾರವಿರಲಿ ಇಲ್ಲದಿರಲಿ ಸಂಘ, ಸಮಾಜದ ಕುರಿತಾಗಿ ಆಗುವ ಕೆಲಸ ಕ್ಷಣಾರ್ಧದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಫೋನಾಯಿಸಿ ತಿಳಿಸುವ ಅವರ ಮಾತಿನ ಚಾಟಿ ಇಂದಿಗೂ ಮರೆಯುವ ಆಗಿಲ್ಲ ಎಂದು ನೆನಪು ಮಾಡಿಕೊಳ್ಳುತ್ತಾರೆ ನಗರಸಭೆ ವಾರ್ಡ್ ನಂ.19 ರ ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ.
ಅಪ್ಪಾಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಬಸವರಾಜ್ ಬಿ ಆನೆಕೊಪ್ಪ ಅವರು, ನಾನು ಎಂದಿಗೂ ವೈಯಕ್ತಿಕವಾಗಿ ಅವರೊಂದಿಗೆ ಅಧಿಕಾರಕ್ಕಾಗಿ ಇರಲಿಲ್ಲ. ಅವರ ಅಭಿಮಾನಿಯಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅವರೊಂದಿಗಿದ್ದೆ. ಎಲ್ಲಾ ತಳ ಸಮುದಾಯದ ಬಡ ವರ್ಗದವರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಧೀಮಂತ ನಾಯಕ ಅಪ್ಪಾಜಿ ಅವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ನಾನು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷನಾದ ನಂತರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು 2 ಕೋ. ರೂ ಅನುದಾನ ಬಿಡುಗಡೆ ಮಾಡಿಸಿದ್ದರು.
ಅವರಿಂದ ನಾನು ಎಂದಿಗೂ ವೈಯಕ್ತಿಕ ಲಾಭವನ್ನು ಬಯಸಲಿಲ್ಲ. ಕೊನೆ ಘಳಿಗೆಯಲ್ಲಿ ಅವರ ನಿಧನದ ನಂತರ ಅವರ ಆಶೀರ್ವಾದದಿಂದ ನಾನೂ ಸಹ ನಗರಸಭಾ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಜನಸೇವೆ ಮಾಡಲು ಅವಕಾಶ ಲಭಿಸಿದೆ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಹೋರಾಟದ ಗುಣಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ಜನ ಸೇವೆಯಲ್ಲಿ ತೊಡಗುತ್ತೇನೆ. ಅಪ್ಪಾಜಿ ರವರ ಅಧಿಕಾರವಧಿಯಲ್ಲಿ ಮಾಡಲಾಗಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆನಪು ಮಾಡಿಕೊಂಡ ಬಸವರಾಜ್ ಅವರ ಸಾಧನೆಗಳೊಂದಿಗೆ ಇಂದಿಗೂ ನಮ್ಮೊಂದಿಗೆ ಇದ್ದಾರೆ.